ಸುಂಟಿಕೊಪ್ಪ: ಆಟೋರಿಕ್ಷಾ-ಬೈಕ್ ನಡುವೆ ಅಪಘಾತ; ಸವಾರನಿಗೆ ಗಾಯ
ಸುಂಟಿಕೊಪ್ಪ,ನ.27: ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೂರ್ಗ್ ಹಳ್ಳಿ ತೋಟದ ಅಂದಗೋವೆ ವೃತ್ತದ ಬಳಿ ವರದಿಯಾಗಿದೆ.
ಶಾಂತಗೀರಿ ತೋಟದ ಸಮೀಪ ನಾಕೂರು ಶಿರಂಗಾಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಂದಗೋವೆ ವೃತ್ತದ ಬಳಿ ಮಂಗಳವಾರ ಬೆಳಗ್ಗೆ ಕಾನ್ಬೈಲ್ ಕಡೆಯಿಂದ ಸುಂಟಿಕೊಪ್ಪ ಆಗಮಿಸುತ್ತಿದ್ದ ಆಟೋರಿಕ್ಷಾ ಹಾಗೂ ಸುಂಟಿಕೊಪ್ಪದಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಬೈಕ್ ಸವಾರ ಹಕೀಂ ತಲೆ ಹಾಗೂ ಕೈ ಕಾಲುಗಳಿಗೆ ಗಾಯವಾಗಿದ್ದು, ಅವರಿಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರಗೆ ರವಾನಿಸಲಾಗಿದೆ.
ಸುಂಟಿಕೊಪ್ಪ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Next Story