ಯಶ್ – ರಾಧಿಕಾ ದಂಪತಿ ಪುತ್ರಿಗೆ ಅಂಬರೀಶ್ ನೀಡಿದ ವಿಶೇಷ ಗಿಫ್ಟ್ ........ !
ಬೆಂಗಳೂರು, ಡಿ.7: ಮಗು ಹುಟ್ಟಿದ ಖುಶಿಯಲ್ಲಿರುವ ಸಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅಮೂಲ್ಯವಾದ ಉಡುಗೊರೆಯೊಂದನ್ನು ನೀಡಿದ್ದಾರೆ.
ವಾರದ ಹಿಂದೆ ಹುಟ್ಟಿದ ಯಶ್ –ರಾಧಿಕಾ ದಂಪತಿ ಪುತ್ರಿಗೆ ಅಂಬರೀಶ್ 1.5 ಲಕ್ಷ ರೂ. ಮೌಲ್ಯದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದು.
ಅಂಬರೀಶ್ ನಿಧನರಾಗಿ ಹದಿನೈದು ದಿನಗಳು ಕಳೆದಿವೆ. ಆದರೆ ಸಾಯುವ ಮುನ್ನವೇ ಅಂಬರೀಶ್ ಅವರು ಯಶ್–ರಾಧಿಕಾಗೆ ಹುಟ್ಟಲಿರುವ ಮಗುವಿಗೆ ವಿಶೇಷ ತೊಟ್ಟಿಲನ್ನು ಬುಕ್ ಮಾಡಿದ್ದರು.
ಅಂಬರೀಶ್ ತೊಟ್ಟಿಲು ಬುಕ್ ಮಾಡಿರುವ ವಿಚಾರ ಅವರ ಪತ್ನಿ ಸುಮಲತಾ ಅವರಿಗೂ ಗೊತ್ತಿರಲಿಲ್ಲ. ಆದರೆ ಕೆಲವು ದಿನಗಳ ಹಿಂದೆ ಅಂಬರೀಶ್ ಬಳಸುತ್ತಿದ್ದ ಮೊಬೈಲ್ ಗೆ ‘ತೊಟ್ಟಿಲು ರೆಡಿ’ ಎಂಬ ಸಂದೇಶ ಬಂದಿದೆ. ಸುಮಲತಾ ಈ ಬಗ್ಗೆ ವಿಚಾರಿಸಿದಾಗ ಅಂಬರೀಶ್ ಅವರು ಹುಟ್ಟಲಿರುವ ಯಶ್ ಮಗಲಿಗೆ ತೊಟ್ಟಿಲು ಬುಕ್ ಮಾಡಿರುವ ವಿಚಾರ ಗೊತ್ತಾಗಿದೆ.
ಸುಮಲತಾ ಅವರು ಕೂಡಲೇ ಯಶ್ ಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ.