ಹನೂರು: ಅಕ್ರಮ ಲಾಟರಿ ಟಿಕೆಟ್ ಮಾರಾಟ; ಆರೋಪಿ ಸೆರೆ
ಹನೂರು,ಡಿ.11: ಕೇರಳದಿಂದ ಅಕ್ರಮವಾಗಿ ಲಾಟರಿ ಟಿಕೆಟ್ ತಂದು ಮಾರಾಟ ಮಾಡುತ್ತಿದ್ದ ಓರ್ವನನ್ನು ಮಲೈಮಹದೇಶ್ವರ ಬೆಟ್ಟದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳನಾಡಿನ ಮೆಟ್ಟೂರು ತಾಲೂಕಿನ ಕಾರೇಕಾಡು ಗ್ರಾಮದ ಶರವಣ ಬಂಧಿತ ಆರೋಪಿ. ಈತ ಕೇರಳದಿಂದ ಲಾಟರಿ ಟಿಕೆಟ್ಗಳನ್ನು ತಂದು ಮ.ಮ ಬೆಟ್ಟದ ಹಲವು ಕಡೆ ಪೋಲಿಸರ ಕಣ್ಣತಪ್ಪಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಈತನನ್ನು ಚಾಮರಾಜನಗರ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಮನೋಜ್ ಕುಮಾರ್ ಮೀನಾ ಹಾಗೂ ಡಿವೈಎಸ್ಪಿ ಪುಟ್ಟಮಾದ್ದಯ್ಯರವರ ಮಾರ್ಗದರ್ಶನದಲ್ಲಿ ಮತ್ತು ಮಮ ಬೆಟ್ಟ ಠಾಣೆ ಆರಕ್ಷಕ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು.
Next Story