ವಿಜಯಪುರ: ಡೆಕ್ಕನ್ ಬ್ಯಾಂಕ್ ನಲ್ಲಿ ಅವ್ಯವಹಾರ ಆರೋಪ; ದೂರು
ವಿಜಯಪುರ, ಡಿ. 16: ಇಲ್ಲಿನ ಡೆಕ್ಕನ್ ಬ್ಯಾಂಕ್ ನಲ್ಲಿ 6 ಕೋಟಿ ರೂ. ಅವ್ಯವಹಾರದ ಆರೋಪ ಕೇಳಿ ಬಂದಿದೆ.
ಈ ಹಿಂದೆ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬ್ಯಾಂಕ್ ವ್ಯವಸ್ಥಾಪಕ ಬೆಕಿನಾಳಕರ್ ಹಾಗು ಕ್ಯಾಶಿಯರ್ ಅವ್ಯವಹಾರ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ.
ಅವರಿಬ್ಬರು ಸೇರಿ ಬ್ಯಾಂಕಿನ 6 ಕೋಟಿ ರೂ. ಹಣವನ್ನು ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬ್ಯಾಂಕ್ನ ಈಗಿನ ವ್ಯವಸ್ಥಾಪಕ ಡಿಗ್ಗಿ ದೂರಿದ್ದಾರೆ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮುಸ್ತಾಕ್ ಬೆಕಿನಾಳಕರ್ ಎಂಬವರನ್ನು ವಶಕ್ಕೆ ಪಡೆದು ಎಪಿಎಂಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Next Story