ಸುಂಟಿಕೊಪ್ಪ: ಸೀಮೆಎಣ್ಣೆ ಸ್ಟೌವ್ ಸ್ಪೋಟ; ಗಾಯಾಳು ನರ್ಸ್ ಮೃತ್ಯು
ಸುಂಟಿಕೊಪ್ಪ, ಡಿ. 23: ಅಡುಗೆ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಸೀಮೆಎಣ್ಣೆ ಸ್ಟೌವ್ ಸ್ಪೋಟಗೊಂಡ ಪರಿಣಾಮ ಸುಟ್ಟು ಚಿಂತಾಜನಕರಾಗಿ ಆಸ್ಪತ್ರೆಗೆ ದಾಖಲಾಗಿದ್ದ ನರ್ಸ್ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ 108 ಅಂಬ್ಯುಲೆನ್ಸ್ ನಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶೈಲಜಾ (30) ಮೃತರು ಎಂದು ಗುರುತಿಸಲಾಗಿದೆ.
ಮೂಲತಃ ಹೆಬ್ಬಾಲೆಯವರಾಗಿರುವ ಅವರು ಕಳೆದ ಎರಡು ವರ್ಷಗಳಿಂದ ಸುಂಟಿಕೊಪ್ಪದಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡಿ. 5 ರಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹದಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಸೀಮೆಎಣ್ಣೆ ಸ್ವೌವ್ ಸ್ಪೋಟಗೊಂಡಿದೆ. ಇದರಿಂದ ಬೆಂಕಿಯಲ್ಲಿ ದಹನಗೊಂಡು ಚಿಂತಾಜನಕರಾದ ಶೈಲಜಾ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು.
Next Story