ಅನೈತಿಕ ಸಂಬಂಧ ಶಂಕೆ: ಪತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತ್ನಿ
ಮೈಸೂರು,ಜ.9: ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಪತಿಯ ಮೇಲೆ ಪೆಟ್ರೋಲ್ ಸುರಿದು ಪತ್ನಿ ಬೆಂಕಿ ಹಚ್ಚಿದ್ದು, ಸಾವು ಬದುಕಿನ ನಡುವೆ ಪತಿ ಹೋರಾಡುತ್ತಿರುವ ಘಟನೆ ಉದಯಗಿರಿಯ ಸತ್ಯಾನಗರದಲ್ಲಿ ನಡೆದಿದೆ.
ಗಾಯಗೊಂಡ ಪತಿ ಮಹಜರ್ ಪಾಷಾ(45) ನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ಮಮ್ತಾಜ್(44) ಳನ್ನು ಪೊಲೀಸರು ಬಂಧಿಸಿದ್ದಾರೆ. 23 ವರ್ಷಗಳ ಹಿಂದೆ ಸತಿಪತಿಗಳಾಗಿದ್ದ ಮಮ್ತಾಜ್ ಹಾಗೂ ಮಹಜರ್ ಪಾಷಾ ದಂಪತಿ 6 ಮಕ್ಕಳನ್ನು ಹೊಂದಿದ್ದರು. ಮಹಜರ್ ಪಾಷ ಆಟೋ ಡ್ರೈವರ್ ಆಗಿದ್ದರು. ಗಂಡನ ಅನೈತಿಕ ಸಂಬಂಧದ ಬಗ್ಗೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ರಾತ್ರಿ ಮಲಗಿದ್ದ ವೇಳೆ ಮಹಜರ್ ಪಾಷಾ ಮೇಲೆ ಮುಮ್ತಾಜ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ ಎನ್ನಲಾಗಿದೆ. ಕೆ.ಆರ್.ಆಸ್ಪತ್ರೆಯ ಬರ್ನ್ಸ್ ವಾರ್ಡ್ ನಲ್ಲಿ ಮಹಜರ್ ಪಾಷಾ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story