ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ 1 ಲಕ್ಷ ಪಡೆದು ವಂಚನೆ: ಆರೋಪ
ಮೈಸೂರು,ಜ.12: ಮೆಡಿಕಲ್ ಸೀಟ್ ಕೊಡಿಸುವುದಾಗಿ ಲಕ್ಷಗಟ್ಟಲೆ ಹಣವನ್ನು ಪಡೆದು ವಂಚಿಸಿದ್ದಾರೆಂದು ಆರೋಪಿಸಿ ವ್ಯಕ್ತಿಯೋರ್ವರು ವಿಜಯನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.
ವಿಪುಲ್ ಕುಮಾರ್ ಎಂಬವರೇ ದೂರು ನೀಡಿದವರಾಗಿದ್ದು, ಮಹೇಶ್ ಪಟೇಲ್ ಎಂಬಾತ ಪರ್ಫೆಕ್ಟ್ ಕೆರಿಯರ್ ಗೈಡ್ ಹೆಸರಿನಲ್ಲಿ ತನ್ನ ಮಗನಿಗೆ ಕಸ್ತೂರಿ ಬಾ ಮೆಡಿಕಲ್ ಕಾಲೇಜ್, ರೂರಲ್ ಮೆಡಿಕಲ್ ಕಾಲೇಜ್ ನಲ್ಲಿ ಸೀಟ್ ಕೊಡಿಸುವುದಾಗಿ ನಂಬಿಸಿ 1 ಲಕ್ಷ ಹಣವನ್ನು ಅಕೌಂಟ್ ಗೆ ಹಾಕಿಸಿಕೊಂಡು, ಸೀಟ್ ಕೊಡಿಸಿದೇ ಮೋಸ ಮಾಡಿದ್ದಾನೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story