ಎಂ.ಬಿ.ಪಾಟೀಲ್ ಒಬ್ಬ ಮಂಗ: ಶಾಮನೂರು ಶಿವಶಂಕರಪ್ಪ ತಿರುಗೇಟು
ದಾವಣಗೆರೆ,ಜ.13: ಗೃಹ ಸಚಿವ ಎಂ.ಬಿ. ಪಾಟೀಲ್ ಇನ್ನೂ ಸಣ್ಣ ಹುಡುಗ. ಅವನಿಗೇನು ಗೊತ್ತು ನಾನು ಹೇಗೆ ಬೆಳೆದಿದ್ದೇನೆಂದು. ಅವನೊಬ್ಬ ಮಂಗ ಎಂದು ಶಾಸಕ ಹಾಗೂ ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿರುಗೇಟು ನೀಡಿದರು.
ಹುಬ್ಬಳ್ಳಿಯಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಎಂ.ಬಿ.ಪಾಟೀಲ್ ಒಬ್ಬ ಮಂಗ. ಆತನಿಗೇನು ಗೊತ್ತಿದೆ ನನ್ನ ಬಗ್ಗೆ. ಈ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ, ಆತನ ವಿರುದ್ಧವು ಮಾತನಾಡುವುದಿಲ್ಲ. ನಾನು ಹೇಳಿಕೆ ನೀಡಿರುವುದು ಸಮಾಜ ಒಡೆಯುವವರ ಬಗ್ಗೆಯೇ ಹೊರತು ಎಂ.ಬಿ.ಪಾಟೀಲ್ ಬಗ್ಗೆ ಅಲ್ಲ ಎಂದರು.
ಈ ಹಿಂದೆ ಎಂ.ಬಿ. ಪಾಟೀಲ್ ಅಡ್ಡದಾರಿ ಹಿಡಿದಿದ್ದ. ನಾನು ಹಾಗೂ ಪ್ರಭಾಕರ್ ಕೋರೆ ಆತನನ್ನು ಕೈಹಿಡಿದು ಉದ್ಧಾರ ಮಾಡಿದ್ದೇವೆ ಎಂದು ತಿಳಿಸದರು.
Next Story