ಹುಬ್ಬಳ್ಳಿ: ಯುವತಿಯರನ್ನು ಚುಡಾಯಿಸುತ್ತಿದ್ದ ನಾಲ್ವರ ಬಂಧನ
ಹುಬ್ಬಳ್ಳಿ, ಜ.15: ಬೀದಿಯಲ್ಲಿ ಯುವತಿಯರನ್ನು ಚುಡಾಯಿಸುತ್ತಿದ್ದ ನಾಲ್ವರು ಯುವಕರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಟೂರು ರಸ್ತೆಯ ಹರಿಶ್ಚಂದ್ರ ಕಾಲೋನಿ ನಿವಾಸಿಗಳಾದ ಅಮೀರ್ ಬಜರುಖ್ ಸಾಬ ಬೇಟಗೇರಿ (18) ಅಶ್ಪಾಕ್ ಮದ್ರಾಸ್ (18), ರಿಯಾಝ್ ಮದ್ರಾಸ್(18), ಅನಿಲ ಜಗತಾಪ (27) ಬಂಧಿತ ಆರೋಪಿಗಳು.
ಇವರು ಹಳೇ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನಡೆದಾಡುವ ಯುವತಿಯರಿಗೆ ಚುಡಾಯಿಸಿತ್ತಾ, ಅಸಹ್ಯವಾಗಿ ಸನ್ನೆ ಮಾಡಿ ನಿಂದಿಸುತ್ತಿದ್ದರು ಎನ್ನಲಾಗಿದ್ದು, ಇದರ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಚೆನ್ನಮ್ಮ ಪಡೆ ಮಹಿಳಾ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಹುಧಾ ಪೊಲೀಸ್ ಆಯುಕ್ತ ಎಂ.ಎನ್ ನಾಗರಾಜ್ ನಗದು ಬಹುಮಾನ ಘೋಷಿಸಿದ್ದಾರೆ.
Next Story