ಧಾರವಾಡದ ಪ್ರಸಿದ್ಧ 'ಮಿಶ್ರಾ' ಪೇಡಾ ಮಾಲಕನ ಮನೆ ಮೇಲೆ ಐಟಿ ದಾಳಿ
ಹುಬ್ಬಳ್ಳಿ, ಜ.17: ಧಾರವಾಡದ ಪ್ರಸಿದ್ಧ 'ಮಿಶ್ರಾ' ಪೇಡಾ ಮಾಲಕ ಸಂಜಯ್ ಮಿಶ್ರಾ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿ 'ಬಿಗ್ ಮಿಶ್ರಾ' ಸ್ವೀಟ್ ಮಳಿಗೆಗಳನ್ನು ಹೊಂದಿರುವ ಸಂಜಯ್ ಮಿಶ್ರಾ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
40 ಜನ ಐಟಿ ಅಧಿಕಾರಿಗಳ ನೇತೃತ್ವದಲ್ಲಿ 6 ಕಡೆ ದಾಳಿ ನಡೆಸಲಾಗಿದೆ. ಗೋವಾ ಸೇರಿ ಹೊರರಾಜ್ಯದ ಅಧಿಕಾರಿಗಳನ್ನು ದಾಳಿಗೆ ಬಳಸಿಕೊಂಡು ತಡರಾತ್ರಿ ಹುಬ್ಬಳ್ಳಿಗೆ ಬಂದಿಳಿದಿದ್ದ ಅಧಿಕಾರಿಗಳು ಬಿಗ್ ಮಿಶ್ರಾ ಮಾಲಕನಿಗೆ ಶಾಕ್ ನೀಡಿದ್ದಾರೆ. ಬಿಗ್ ಮಿಶ್ರಾದಲ್ಲಿ ಹಣ ಹೂಡಿಕೆ ಮಾಡಿದವರ ಮನೆಗಳಿಗೂ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ ಎನ್ನಲಾಗಿದೆ.
Next Story