ಈಜಲು ತೆರಳಿದ ವಿದ್ಯಾರ್ಥಿ ಮೃತ್ಯು
ಸಾಗರ,ಎ.6: ನೀರಿನ ಹೊಂಡಕ್ಕೆ ಈಜಲು ಇಳಿದ ವಿದ್ಯಾರ್ಥಿಯೋರ್ವ ಮುಳುಗಿ ಮೃತಪಟ್ಟ ಘಟನೆ ಇಲ್ಲಿನ ಜೋಗ್ ಫಾಲ್ಸ್ ಬಳಿ ಇರುವ ಫಾತಿಮಾ ನಗರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಡಿಯೋನಾ(14) ಎಂದು ಗುರುತಿಸಲಾಗಿದೆ.
ಈತ ಹೊನ್ನಾವರದ ಆರೋಗ್ಯಮಾತಾ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಂದು ಯುಗಾದಿ ನಿಮಿತ್ತ ಶಾಲೆಗೆ ರಜೆ ಇರುವುದರಿಂದ ಡಿಯೋನಾ ತನ್ನ ಸಹಪಾಠಿಗಳೊಂದಿಗೆ ಪ್ರವಾಸಕ್ಕೆ ಬಂದಿದ್ದನು. ಬಳಿಕ ಈಜಲು ನೀರಿನ ಹೊಂಡಕ್ಕೆ ಇಳಿದಿದ್ದಾಗ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಜೋಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story