ಎ.21: ಅಲ್-ಅಮೀನ್ ಸಮಿತಿಯಿಂದ 25 ಜೋಡಿಯ ಸಾಮೂಹಿಕ ವಿವಾಹ
ಮಡಿಕೇರಿ,ಎ.19: ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಮುಸ್ಲಿಂ ಸಮಾಜದ ಬಡಕುಟುಂಬದ 25 ಕನ್ಯೆಯರ ಸಾಮೂಹಿಕ ವಿವಾಹ ಸಮಾರಂಭ ಎ.21 ರಂದು ನಗರದ ಕಾವೇರಿ ಹಾಲ್ನಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 11.30 ಗಂಟೆಗೆ ಧರ್ಮಗುರು ಸೈಯದ್ ಸಪ್ವಾನ್ ತಂಞಳ್ ಕಣ್ಣೂರು ಅವರು ನಿಖಾಹ್ ನೆರವೇರಿಸಲಿದ್ದಾರೆ. ಅಲ್-ಅಮೀನ್ ಸಂಸ್ಥೆಯ ಅಧ್ಯಕ್ಷ ನಿವೃತ್ತ ಉಪತಹಶೀಲ್ದಾರ್ ಎಫ್.ಎ.ಮುಹಮದ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಅಲ್-ಅಮೀನ್ ಸಮಿತಿಯ ಮಹಾಪೋಷಕ ಹಾಗೂ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಅವರು ಉದ್ಘಾಟಿಸಲಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎ.ಅಬ್ದುಲ್ ರಝಾಕ್ ತಿಳಿಸಿದ್ದಾರೆ.
ಸಾಮೂಹಿಕ ವಿವಾಹಕ್ಕೆ ಆಯ್ಕೆಯಾಗಿರುವ ವಧು, ವರರು ಸಮಾರಂಭದ ದಿನ ಬೆಳಗ್ಗೆ 10 ಗಂಟೆಯೊಳಗೆ ಸ್ಥಳದಲ್ಲೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಕೋರಿಕೊಂಡಿದ್ದಾರೆ.
Next Story