ಎರಡನೆ ಹಂತದ ಮತದಾಣ ಶಾಂತಿಯುತ: ಮಳೆ-ಬಿಸಿಲಿನ ನಡುವೆಯೂ ಶೇ.64.94 ಮತ ಚಲಾವಣೆ | Vartha Bharati- ವಾರ್ತಾ ಭಾರತಿ

---

237 ಅಭ್ಯರ್ಥಿಗಳ ಭವಿಷ್ಯ ಬರೆದ ಮತದಾರರು

ಎರಡನೆ ಹಂತದ ಮತದಾಣ ಶಾಂತಿಯುತ: ಮಳೆ-ಬಿಸಿಲಿನ ನಡುವೆಯೂ ಶೇ.64.94 ಮತ ಚಲಾವಣೆ

ಬೆಂಗಳೂರು, ಎ. 23: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಎರಡನೆ ಹಂತದ ಮತದಾನ ಕೆಲವೆಡೆ ಇವಿಎಂಗಳ ದೋಷ, ವಿಳಂಬ, ಬಿಸಿಲು- ಮಳೆ ಕಾರಣಕ್ಕೆ ನಿರಸ, ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ಹೊರತುಪಡಿಸಿದರೆ ಶಾಂತಿಯುತ ಅಂತ್ಯ ಕಂಡಿದೆ. ಒಟ್ಟಾರೆ ಶೇ.64.94ರಷ್ಟು ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದ್ದು, ಮೇ 23ರ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ಮಂಗಳವಾರ ಬೆಳಗ್ಗೆ 7ಗಂಟೆಯಿಂದ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿಯೂ ಉತ್ಸಾಹದಿಂದಲೇ ಆರಂಭವಾದ ಮತದಾನ ಅತ್ಯಂತ ವೇಗವಾಗಿ ಸಾಗುತ್ತಿದ್ದರೂ, ಮಧ್ಯಾಹ್ನದ ವೇಳೆಗೆ ಅತ್ಯಧಿಕ ಬಿಸಿಲಿನ ಪರಿಣಾಮ ಕೊಂಚ ಕಡಿಮೆಯಾಯಿತು. ಸಂಜೆ ವೇಳೆಗೆ ಮತ್ತೆ ಚುರುಕು ಪಡೆದುಕೊಂಡಿದ್ದು, ಎಲ್ಲೆಡೆ ಅಧಿಕ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳ ಕಡೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 28,022 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಮತದಾರರು ಅತ್ಯಂತ ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಕಪ್ಪುಪಟ್ಟಿ ಧರಿಸಿ ಮತದಾನ: ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವು ಖಂಡಿಸಿ ಹಲವು ಕಡೆ ಮತದಾರರು ಕಪ್ಪುಪಟ್ಟಿ ಧರಿಸಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದ್ದು ವಿಶೇಷವಾಗಿದ್ದು, ಈ ಮೂಲಕ ಮತದಾರರು ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು.

ವಿಜಯಪುರ, ಕಲಬುರಗಿ ಸೇರಿ ಹಲವು ಕ್ಷೇತ್ರಗಳಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ಒತ್ತಾಯಿಸಿ ವಿವಿಧ ಹಳ್ಳಿಗಳಲ್ಲಿ ಮತದಾನ ಬಹಿಷ್ಕಾರದ ಮೂಲಕ ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಇವರ ಮನವೊಲಿಸಲು ರಾಜಕೀಯ ಪಕ್ಷಗಳ ನಾಯಕರು ಹಾಗೂ ಅಭ್ಯರ್ಥಿಗಳು ಗ್ರಾಮಗಳಿಗೆ ತೆರಳಿ ಅವರಲ್ಲಿ ಮನವಿ ಮಾಡುವ ಪ್ರಯತ್ನ ನಡೆಸಿದರು.

ಎರಡನೆ ಹಂತದ ಮತದಾನಯಲ್ಲಿ ತೀವ್ರ ಪೈಪೋಟಿ ಸೃಷ್ಟಿಸಿರುವ ಹಾಗೂ ದೇಶದ ಗಮನ ಸೆಳೆದಿರುವ ಶಿವಮೊಗ್ಗ, ಕಲಬುರಗಿ ಕ್ಷೇತ್ರಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದ್ದಾರೆ. ಆದರೂ, ಈ ಬಾರಿ ಕಲಬುರಗಿಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದ್ದರೆ, ಶಿವಮೊಗ್ಗ ಅತ್ಯಧಿಕ ಮತದಾನ ನಡೆದಿದೆ.

ಕೈಕೊಟ್ಟ ಮತಯಂತ್ರ: 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಲವೆಡೆ ಇವಿಎಂಗಳು ಕೈಕೊಟ್ಟಿದ್ದರಿಂದ ಮತದಾನ ಆರಂಭಕ್ಕೆ ವಿಳಂಬವಾದ ಘಟನೆಗಳು ನಡೆದಿವೆ. ಬಾಗಲಕೋಟೆ ನಗರ ವ್ಯಾಪ್ತಿಯಲ್ಲಿನ ಸರಕಾರಿ ಶಾಲೆಯಲ್ಲಿನ ಮತಗಟ್ಟೆಯೊಂದರಲ್ಲಿ ಮತದಾರರು ಮತ ಚಲಾಯಿಸಲು ಸರತಿ ಸಾಲಿನಲ್ಲಿದ್ದರೂ, ಇವಿಎಂ ತಾಂತ್ರಿಕ ತೊಂದರೆಯಿಂದ ಮತದಾನ ವಿಳಂಬವಾಯಿತು.

ವಿಳಂಬದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತಗಟ್ಟೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ವರದಿಯಾಗಿದೆ. ಹುಬ್ಬಳ್ಳಿ ವಿದ್ಯಾನಗರ ಮತಗಟ್ಟೆಯಲ್ಲಿ ಇವಿಎಂ ಕೆಲಸ ಮಾಡದಿದ್ದರಿಂದ ಮತದಾನ ತಡವಾಗಿ ಆರಂಭವಾಗಿದೆ. ಬೀದರ್‌ನ ಭಾಲ್ಕಿ ತಾಲೂಕಿನ ಜಹಿನಾಪೂರ್‌ನಲ್ಲಿ ಚುನಾವಣಾ ಸಿಬ್ಬಂದಿಯ ನಿರ್ಲಕ್ಷದಿಂದ 45 ನಿಮಿಷ ವಿಳಂಬವಾಗಿ ಮತದಾನ ನಡೆದಿದೆ.

ಹುಮ್ನಾಬಾದ್ ತಾಲೂಕಿನ ಮಂಗಲಗಿಯಲ್ಲಿ ಮತಯಂತ್ರ ದೋಷದಿಂದಾಗಿ ಮತದಾನಕ್ಕೆ ಬಂದು ಹಕ್ಕು ಚಲಾಯಿಸಲು ಕಾದು ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ, ಉತ್ತರಕನ್ನಡ ಜಿಲ್ಲೆ ಕಾರವಾರ, ಗಂಗಾವತಿ ಸೇರಿದಂತೆ ಹಲವಡೆ ಇವಿಎಂನಲ್ಲಿ ದೋಷ ಕಂಡುಬಂದು, ಮತದಾನಕ್ಕೆ ವಿಳಂಬವಾಗಿದೆ.

ಇವಿಎಂನಲ್ಲಿ ಭವಿಷ್ಯ ಭದ್ರ: ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿರುವ ಕಲಬುರಗಿ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಎರಡನೆ ಹಂತದ 14 ಲೋಕಸಭಾ ಕ್ಷೇತ್ರಗಳ 237 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆದಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಂ ಸೇರಿದೆ.
ಯುವಕರ ಉತ್ಸಾಹ: ಮೊದಲ ಬಾರಿಗೆ ಹಕ್ಕು ಮತದಾನದ ಅವಕಾಶ ಸಿಕ್ಕ ಯುವಕ-ಯುವತಿಯರು, ವಿಕಲಚೇತನರು, ಮಹಿಳೆಯರು, ವೃದ್ಧರು ಸೇರಿದಂತೆ ಜನಸಾಮಾನ್ಯರು ಉತ್ಸಾಹದಿಂದಲೇ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ಸುಡು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ಡಾ.ಉಮೇಶ್ ಜಾಧವ್, ಈಶ್ವರ್ ಖಂಡ್ರೆ, ಭಗವಂತ ಖೂಬಾ, ಅನಂತಕುಮಾರ್ ಹೆಗಡೆ, ಆನಂದ್ ಆಸ್ನೋಟಿಕರ್, ವಿನಯ್‌ ಕುಲಕರ್ಣಿ, ಪ್ರಹ್ಲಾದ್ ಜೋಶಿ, ವಿ.ಎಸ್.ಉಗ್ರಪ್ಪ, ವೀಣಾ ಕಾಶೆಪ್ಪನವರ್, ಬಿ.ವೈ.ರಾಘವೇಂದ್ರ, ಮಧುಬಂಗಾರಪ್ಪ, ರಮೇಶ್ ಜಿಗಜಿಣಗಿ ಸೇರಿ ಹಲವು ಘಟಾನುಘಟಿಗಳ ಭವಿಷ್ಯವನ್ನು ಮತದಾರರು ಬರೆದಿದ್ದಾರೆ.

ಮದ್ಯ ನಿಷೇಧ: ಮುನ್ನಚ್ಚರಿಕೆ ಕ್ರಮವಾಗಿ ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಮತಗಟ್ಟೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕೆಲ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತ ಅಂತ್ಯವಾಗಿದೆ.

ಹೊಸ ಜೀವನಕ್ಕೆ ಕಾಲಿಡುತ್ತಿರುವ ನವ ವಿವಾಹಿತ ಜೋಡಿಯೊಂದು ಮತಗಟ್ಟೆಗೆ ತೆರಳಿ ಮತ ಹಾಕುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಎಲ್ಲರ ಗಮನೆ ಸೆಳೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇಲ್ಲಿನ ದಾಜಿಬಾನಪೇಟೆಯ ಸೀತಾಬಾಯಿ ಕಲ್ಯಾಣಮಂಟಪದಲ್ಲಿ ಮದುವೆಯಾಗಿದ್ದ ಅಮಿತ್ ಹಾಗೂ ವರ್ಷಾ ಕಾಟವೆ ಜೋಡಿ ನೇರವಾಗಿ ಕಮರಿಪೇಟೆ ಸರಕಾರಿ ಶಾಲೆ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top