ಕೈಕೊಟ್ಟ ಮತಯಂತ್ರ: ಕೆಲವೆಡೆ ಮತದಾನ ಬಹಿಷ್ಕಾರ | Vartha Bharati- ವಾರ್ತಾ ಭಾರತಿ

---

ರಾಜ್ಯದ ಎರಡನೇ ಹಂತದ ಮತದಾನ:

ಕೈಕೊಟ್ಟ ಮತಯಂತ್ರ: ಕೆಲವೆಡೆ ಮತದಾನ ಬಹಿಷ್ಕಾರ

ದಾವಣಗೆರೆ, ಎ.23: ದಾವಣಗೆರೆ ಸಮೀಪದ ಶಿರಮಗೊಂಡನಹಳ್ಳಿಯಲ್ಲಿ ಮತಯಂತ್ರ ದೋಷದಿಂದಾಗಿ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು. ನಂತರ ಅಧಿಕಾರಿಗಳು ಇವಿಎಂ ಬದಲಿಸಿ ಮತದಾನಕ್ಕೆ ಚಾಲನೆ ನೀಡಿದರು.

ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್‌ ಇದೇ ಬೂತ್‌ನಲ್ಲಿ ಮತ ಚಲಾವಣೆ ಮಾಡಬೇಕಿತ್ತು. ಇವಿಎಂ ಸರಿಪಡಿಸಿದ ನಂತರ ಶಾಸಕ ರವೀಂದ್ರನಾಥ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಮತದಾನ ಮಾಡುವ ವೇಳೆ ಇವಿಎಂ ಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ದಾವಣಗೆರೆಯ 236ನೇ ಮತಗಟ್ಟೆ ಮಾಗನೂರು ಬಸಪ್ಪಶಾಲೆಯ ಮತದಾನ ಕೇಂದ್ರದಲ್ಲಿ ಸಿದ್ದೇಶ್ವರ್ 3 ನಿಮಿಷ ಕಾದು ಕುಳಿತು, ಸರಿಪಡಿಸಿದ ನಂತರ ಮತದಾನ ಮಾಡಿದರು.

ಇಂಗಳಗುಂದ, ಹರಪನಹಳ್ಳಿಯಲ್ಲೂ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂತು. ಮತಗಟ್ಟೆ ಸಂಖ್ಯೆಗಳಲ್ಲಿ ಬದಲಾವಣೆಯಾದ ಕಾರಣ ಕೆಲಕಾಲ ಗೊಂದಲವಾಗಿತ್ತು. ಇನ್ನು ಕಾನಹಳ್ಳಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತಾಗಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ನಂತರ ಅಧಿಕಾರಿಗಳು ಮನವೊಲಿಸಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು ಇದರಿಂದ ತಡವಾಗಿ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿತು.

ಜಗಳೂರಿನ 4 ಮತಗಟ್ಟೆ ಕೇಂದ್ರಗಳಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದೆ. ನಂತರ ಅದನ್ನು ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ನಗರದ ಬಹುತೇಕ ಭಾಗಗಳಲ್ಲಿ ಮತಯಂತ್ರದಲ್ಲಿ ಕೆಲಕಾಲ ದೋಷ ಕಂಡು ಬಂದಿದ್ದು ನಂತರ ಮತಯಂತ್ರ ಸರಿಪಡಿಸಿದ ಬಳಿಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ 15 ನಿಮಿಷಗಳ ಕಾಲ ಮತದಾನ ಪ್ರಕ್ರಿಯೆ ತಡವಾದ ಘಟನೆ ಜರುಗಿತು.

ಮತದಾನ ಬಹಿಷ್ಕಾರ: ದಾವಣಗೆರೆ ಜಿಲ್ಲೆಯಲ್ಲಿ ಬೆಳಗ್ಗೆ ಮೂರು ಕಡೆ ಮತದಾನ ಬಹಿಷ್ಕಾರವಾದ ಘಟನೆ ನಡೆದಿದೆ. ಮಾಯಕೊಂಡ ಕ್ಷೇತ್ರದ ಬೋರಗೊಂಡನಹಳ್ಳಿಯಲ್ಲಿ ಗ್ರಾಮಸ್ಥರು ಕುಡಿಯುವ ನೀರು, ರಸ್ತೆ, ಕೆರೆಗೆ ನೀರು ತುಂಬಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗ್ಗೆ ಮತದಾನ ಬಹಿಷ್ಕರಿಸಿದ್ದರು.

ನಂತರ ದಾವಣಗೆರೆ ಉಪವಿಭಾಗಾಧಿಕಾರಿ ಕುಮಾರಸ್ವಾಮಿ ಗ್ರಾಮಕ್ಕೆ ಆಗಮಿಸಿ ಚುನಾವಣೆ ಮುಗಿದ ನಂತರ ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮವಹಿಸುವುದಾಗಿ ಮನವೊಲಿಸಿದ ಬಳಿಕ ಗ್ರಾಮಸ್ಥರು ಮತದಾನ ಮಾಡಲು ಮುಂದಾದರು. ಗ್ರಾಮದಲ್ಲಿ 654 ಮತದಾರರಿದ್ದು ಬೆಳಗ್ಗೆ 10.30 ವೇಳೆಯವರೆಗೂ ಇಲ್ಲಿ ಮತದಾನ ಪ್ರಾರಂಭಗೊಂಡಿರಲಿಲ್ಲ.

ಮಾಯಕೊಂಡ ಕ್ಷೇತ್ರದ ರಾಮಪುರ, ಚನ್ನಗಿರಿ ತಾಲೂಕಿನ ಎನ್.ಬಸವನಹಳ್ಳಿ, ಹರಪ್ಪನಹಳ್ಳಿ ತಾಲೂಕಿನ ಕರೇಕಾನಹಳ್ಳಿ ಗ್ರಾಮಸ್ಥರು ಸಹ ಮತದಾನ ಬಹಿಷ್ಕರಿಸಿದ ಘಟನೆ ಜರುಗಿದೆ. ಬೆಳಗ್ಗೆ 8-30ವರೆಗೂ ಮತದಾನ ಮಾಡದೇ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ. ಜಿಲ್ಲಾಧಿಕಾರಿಗಳು ಆಗಮಿಸಿ ಸಮಸ್ಯೆ ನಿವಾರಣೆ ಮಾಡುತ್ತೇವೆ ಎನ್ನುವರೆಗೂ ಮತದಾನ ಬಹಿಷ್ಕರಿಸುವುದಾಗಿ ಗೊಂದಲ ಮೂಡಿಸಿದ್ದರು. ಬಳಿಕ ಅಧಿಕಾರಿಗಳ ಮನವಿಯ ಮೇರೆಗೆ ಮತದಾನ ಮಾಡಿದರು.

ಮೊದಲ ಮತದಾನದ ಸಂಭ್ರಮ: ಯುವ ಮತದಾರರು ಸೇರಿದಂತೆ ಇದೇ ಮೊದಲ ಬಾರಿಗೆ ಮತದಾನ ಮಾಡಿದ ವಿದ್ಯಾರ್ಥಿಗಳಲ್ಲಿ ಸಂಭ್ರಮ ಕಂಡು ಬಂದಿತು. ದಾವಣಗೆರೆ ತಾಲೂಕಿನ ಆಲೂರು ಹಟ್ಟಿ ಗ್ರಾಮದಲ್ಲಿ ಮತದಾನ ಮಾಡಿದ ಯುವ ಸಮೂಹ ಹಕ್ಕು ಚಲಾಯಿಸಿದ ಬಗ್ಗೆ ಸಡಗರ ವ್ಯಕ್ತಪಡಿಸಿದರು.

ಸಖಿ ಮತಗಟ್ಟೆಗಳು: ದಾವಣಗೆರೆಯ ವಿನೋಬಗರದ 54 ನೇ ಸಖೀ ಮತಗಟ್ಟೆ ಕೇಂದ್ರದಲ್ಲಿ ಮಹಿಳೆಯರು ತಮ್ಮ ಮತ ಚಲಾಯಿಸಿದರು. ನಂತರ ಮತಗಟ್ಟೆ ಕೇಂದ್ರದಲ್ಲಿದ್ದ ಸಖಿ ಸೆಲ್ಫಿ ಫ್ರೇಮ್ ನಲ್ಲಿ ಚಿತ್ರ ತೆಗೆದು ಸಂಭ್ರಮಿಸಿದರು. ಹರಪನಹಳ್ಳಿ ಪಟಣ್ಣದ ಉಪ್ಪಾರಗೇರಿ ವಾರ್ಡ್ ನಂ.89ರಲ್ಲಿ ಮಹಿಳೆಯರಿಗೆ ವಿಶೇಷವಾಗಿ ಸಖಿ ಮತಗಟ್ಟಿಗಳ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯ ಸಖಿ ಮತಗಟ್ಟೆ ಕೇಂದ್ರಗಳಲ್ಲಿ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.

60 ಆಟೋಗಳಿಂದ ಉಚಿತಸೇವೆ: ವಿಕಲಚೇತನರು, ಬಾಣಂತಿಯರು ಹಾಗೂ ವಯೋವೃದ್ದರು ತಮ್ಮ ಹಕ್ಕು ಚಲಾಯಿಸಲು ಅನುಕೂಲವಾಗಲೆಂದು ಇದೇ ಪ್ರಥಮ ಬಾರಿಗೆ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಉಚಿತ ಆಟೋ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸುಮಾರು 60 ಆಟೋಗಳು ನಗರಾದ್ಯಂತ ಸಂಚರಿಸಿ ಮತದಾನ ಮಾಡಲು ಸಹಕಾರ ನೀಡಿದರು.

ಹೆಸರುಗಳೇ ನಾಪತ್ತೆ: ನಗರ ವ್ಯಾಪ್ತಿಯಲ್ಲಿ ಕೆಲವೆಡೆ ಮತದಾರರ ಹೆಸರುಗಳೇ ಪಟ್ಟಿಯಲ್ಲಿ ನಾಪತ್ತೆಯಾಗಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು. ಆದರೆ ಈ ಬಾರಿ ಮತದಾನ ಮಾಡಲು ಆಗಮಿಸಿದ್ದ ವೇಳೆ ಅವರ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಇದರಿಂದ ಬೇಸರಗೊಂಡು ಅಧಿಕಾರಿಗಳ ನಿರ್ಲಕ್ಷಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top