ಸಾಗರದ ಇಬ್ಬರಲ್ಲಿ ಹೆಚ್1ಎನ್1 ಪತ್ತೆ
ಶಿವಮೊಗ್ಗ, ಎ. 25: ಜಿಲ್ಲೆಯ ಸಾಗರ ತಾಲೂಕಿನ ವಿವಿಧೆಡೆ ಕಳೆದ ಹಲವು ತಿಂಗಳಿನಿಂದ ಮಂಗನ ಕಾಯಿಲೆ ನಾಗರಿಕರನ್ನು ಬೆಂಬಿಡದೆ ಕಾಡುತ್ತಿದೆ. ಈ ನಡುವೆ ಹೆಚ್1ಎನ್1 ಕೂಡ ಕಾಣಿಸಿಕೊಂಡಿದ್ದು, ಇದು ಸ್ಥಳೀಯ ನಾಗರೀಕರ ನೆಮ್ಮದಿಗೆ ಭಂಗ ತರುವಂತಾಗಿದೆ.
ಸಾಗರ ತಾಲೂಕಿನ ಮಾಲ್ವೆ ಗ್ರಾಮದ ಮಂಜಮ್ಮ ಹಾಗೂ ಅಣಲೆಕೊಪ್ಪದ ಕವಿತಾ ಅವರಲ್ಲಿ ಹೆಚ್1ಎನ್1 ಸೋಂಕಿರುವುದು ದೃಢಪಟ್ಟಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಇವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ವೇಳೆ, ಹೆಚ್1ಎನ್1 ಸೋಂಕಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
Next Story