ಪಾರ್ಶ್ವವಾಯುಗೆ ತುತ್ತಾಗಿ ನಾಲೆಗೆ ಬಿದ್ದು ವೃದ್ಧ ಮೃತ್ಯು
ದಾವಣಗೆರೆ,ಎ.29: ಬಯಲು ವಿಸರ್ಜನೆಗೆ ಆಗಮಿಸಿದ್ದ ವೃದ್ಧರೊಬ್ಬರು ಪಾರ್ಶ್ವವಾಯುಗೆ ತುತ್ತಾಗಿ ಆಯತಪ್ಪಿ ನಾಲೆಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ನಗರದ ಎಸ್.ಓ.ಜಿ ಕಾಲೋನಿಯ ನಾಲೆಯಲ್ಲಿ ನಡೆದಿದೆ.
ಇಲ್ಲಿನ ಬೆಂಕಿನಗರದ ವಯೋವೃದ್ಧ ನಾಗಪ್ಪ (75) ಮೃತ ವ್ಯಕ್ತಿ. ಬಯಲು ವಿಸರ್ಜನೆಗೆಂದು ನಾಲೆ ಬಳಿ ಬಂದಿದ್ದ ನಾಗಪ್ಪಗೆ ಅದೇ ಸಂದರ್ಭ ಪಾರ್ಶ್ವವಾಯು ತಗುಲಿ ಆಯತಪ್ಪಿ ನಾಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಸ್ಥಳೀಯ ಯುವಕರು ನಾಲೆಗೆ ಜಿಗಿದು ನಾಗಪ್ಪರನ್ನು ದಡಕ್ಕೆ ತರುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಈ ಪ್ರಕರಣ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story