ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ ಅವಧಿ ವಿಸ್ತರಣೆ
ಬೆಂಗಳೂರು, ಮೇ 6: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರು ವೌಲ್ಯಮಾಲನ ಹಾಗೂ ಮರುಎಣಿಕೆ ದಿನಾಂಕವನ್ನು ವಿದ್ಯಾರ್ಥಿಗಳು ಮತ್ತು ಪೋಷಕರ ಕೋರಿಕೆ ಮೇರೆಗೆ ಮೇ 10ರ ವರೆಗೆ ವಿಸ್ತರಿಸಲಾಗಿದೆ.
ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಮೌಲ್ಯಮಾಲನ ಹಾಗೂ ಮರುಎಣಿಕೆಗೆ ಮೇ 8 ಕೊನೆಯ ದಿನವಾಗಿದ್ದು, ಇದೀಗ ಅದನ್ನು ಮೇ 10ರ ವರೆಗೆ ವಿಸ್ತರಿಸಿದೆ. ಈ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
Next Story