ಉಪ ಚುನಾವಣೆ: ಚಿಂಚೋಳಿ, ಕುಂದಗೋಳದಲ್ಲಿ ಮತದಾನ
ಬೆಂಗಳೂರು, ಮೇ 19: ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಆರಂಭಗೊಂಡಿದೆ.
ಚಿಂಚೋಳಿ ತಾಲೂಕಿನ ರುಸ್ತಂಪುರ ಗ್ರಾಮದ ಒಂದು ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟ ಕಾರಣ ಮತದಾನ ವಿಳಂಬವಾಗಿ ಆರಂಭಗೊಂಡಿತ್ತು. ಉಳಿದಂತೆ ಮತದಾನ ಶಾಂತವಾಗಿ ಮುಂದುವರಿದಿದೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ಚಿಂಚೋಳಿಯಲ್ಲಿ 7.88 ಶೇ. ಹಾಗೂ ಕುಂದಗೋಳದಲ್ಲಿ 9.59 ಶೇ. ಮತದಾನವಾಗಿತ್ತು.
Next Story