ಆಸ್ತಿ ವಿವಾದ: ಮಗಳಿಂದಲೇ ಹಲ್ಲೆಗೊಳಗಾಗಿದ್ದ ವಯೋವೃದ್ಧ ಮೃತ್ಯು
ದಾವಣಗೆರೆ, ಮೇ 24: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗಳಿಂದಲೇ ಹಲ್ಲೆಗೊಳಗಾಗಿದ್ದ ವಯೋವೃದ್ಧ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹೊನ್ನಾಳಿ ತಾಲೂಕು ಕೋಟೆಮಲ್ಲೂರು ಗ್ರಾಮದ ನಿಂಗಪ್ಪ(85) ಮೃತ ವ್ಯಕ್ತಿ. ಕಳೆದ ಮೇ 5ರಂದು ಆಸ್ತಿ ವಿಚಾರವಾಗಿ ಇವರ ಪುತ್ರಿ ಗಿರಿಜಮ್ಮ(60) ಜೊತೆ ಗಲಾಟೆಯಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಗಿರಿಜಮ್ಮ ಕಲ್ಲಿನಿಂದ ತಂದೆಯ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾಗಿ ಕೋಮಾ ಸ್ಥಿತಿ ತಲುಪಿದ್ದ ನಿಂಗಪ್ಪರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಂಗಪ್ಪ ಗುರುವಾರ ಮೃತಪಟ್ಟಿದ್ದಾರೆ.
ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story