ಸಚಿವ ಡಿ.ಸಿ.ತಮ್ಮಣ್ಣಗೆ ಟ್ವೀಟರ್ನಲ್ಲಿ ಸಿಎಂ ಬುದ್ಧಿವಾದ
ಸಚಿವ ಡಿ.ಸಿ.ತಮ್ಮಣ್ಣ
ಬೆಂಗಳೂರು, ಜೂ.9: ಮಂಡ್ಯದಲ್ಲಿ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಸಾರ್ವಜನಿಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ವರ್ತನೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟರ್ನಲ್ಲಿ ಅವರಿಗೆ ಬುದ್ಧಿವಾದ ಹೇಳಿದ್ದಾರೆ.
‘ಚುನಾವಣೆ ರಾಜಕೀಯವನ್ನು ಅಭಿವೃದ್ಧಿಯೊಂದಿಗೆ ಬೆರೆಸುವುದು ಸೂಕ್ತವಲ್ಲ. ಜನಪ್ರತಿನಿಧಿಗಳಾದ ಹಾಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದಿರುವ ನಾವೆಲ್ಲರೂ ಪಕ್ಷತೀತಾವಾಗಿ ಜನರ ರಾಜಕೀಯ ಒಲವನ್ನು ಪರಿಗಣಿಸದೆ, ಒಟ್ಟಾಗಿ ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ. ಇದೇ ಪ್ರಜಾಪ್ರಭುತ್ವದ ಸತ್ವ-ಸಾರ’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
Next Story