ಬಿಜೆಪಿ ವಿರುದ್ಧ ಸದನದಲ್ಲಿ ಕಾಂಗ್ರೆಸ್ ನಾಯಕರ ಮೆಗಾ ಪ್ಲಾನ್
ಬೆಂಗಳೂರು , ಜು.12: ಸರಕಾರವನ್ನು ಉರುಳಿಸುವ ತಯಾರಿಯಲ್ಲಿರುವ ವಿಪಕ್ಷ ಬಿಜೆಪಿಯನ್ನು ವಿಧಾನ ಸಭೆಯಲ್ಲಿ ಎದುರಿಸಲು ಕಾಂಗ್ರೆಸ್ ಪಕ್ಷದ ನಾಯಕರು ಮೆಗಾ ಪ್ಲಾನ್ ರೂಪಿಸಿದ್ದಾರೆ.
ಕಾಂಗ್ರೆಸ್ ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿದ್ದು, ಬಿಜೆಪಿಯನ್ನು ಎದುರಿಸಲು ತಯಾರಿ ನಡೆಸಿದೆ.
ಬಿಜೆಪಿ ಸದಸ್ಯರು ಸದಸ್ಯರು ಸದನದಲ್ಲಿ ಗದ್ದಲವನ್ನುಂಟು ಮಾಡಿದರೆ ಅವರ ವಿರುದ್ಧ ಘೋಷಣೆ ಕೂಗಲಿದೆ. ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೂ ಕಾಂಗ್ರೆಸ್ ಸವಾಲು ಹಾಕಲಿದ್ದು, ಬಿಜೆಪಿಯನ್ನು ಕೆಣಕಲು ಮುಂದಾಗಿದೆ ಎಂದು ತಿಳಿದು ಬಂದಿದೆ.
Next Story