ಕೋಲಾರ: ಟಿಕ್ಟಾಕ್ಗೆ ಕಾಲೇಜು ವಿದ್ಯಾರ್ಥಿನಿ ಬಲಿ
ಕೋಲಾರ, ಜು.13: ಟಿಕ್ಟಾಕ್ ವೀಡಿಯೋ ಚಿತ್ರೀಕರಿಸಲು ಹೋಗಿ ಪದವಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಕೋಲಾರ ತಾಲೂಕಿನ ವಡಗೇರಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕೋಲಾರ ಮಹಿಳಾ ಕಾಲೇಜಿನ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ ಮಾಲಾ ಎಂದು ಗುರುತಿಸಲಾಗಿದೆ. ಕೃಷಿ ಹೊಂಡದ ಬಳಿ ಟಿಕ್ಟಾಕ್ ವೀಡಿಯೋ ಚಿತ್ರೀಕರಿಸುವ ವೇಳೆ ಈ ದುರಂತ ಸಂಭವಿಸಿದೆ. ವೀಡಿಯೊ ಮಾಡುತ್ತಿದ್ದಂತೆ ಮಾಯಾ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದರೆನ್ನಲಾಗಿದೆ. ಹೊಂಡದಿಂದ ಮೇಲೆ ಬರಲಾಗದೆ ಉಸಿರುಗಟ್ಟಿ ಮಾಲಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story