ಆಲ್ದೂರು ಪೊಲೀಸರ ಕಾರ್ಯಾಚರಣೆ: ಎರಡು ಆನೆ ದಂತ ವಶ; 7 ಮಂದಿಯ ಬಂಧನ
ಆಲ್ದೂರು, ಜು.17: ಆಲ್ದೂರಿನ ಬೀರಂಜಿ ಹಳ್ಳದ ವೆಸ್ಟ್ ನ್ ಘಾಟ್ ಹೋಟೆಲ್ ಬಳಿ 7 ಮಂದಿಯನ್ನು ಬಂಧಿಸಿ, ಎರಡು ಆನೆ ದಂತ ವಶಪಡಿಸಿಕೊಂಡ ಘಟನೆ ನಡೆದಿದೆ.
ಆಲ್ದೂರು ಪೋಲಿಸರು ಕಾರ್ಯಾಚರಣೆ ನಡೆಸಿ 7 ಮಂದಿಯನ್ನು ಬಂಧಿಸಿ, ಎರಡು ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳಲ್ಲಿ ಉಡುಪಿಯ ಇಬ್ಬರು, ಮಂಗಳೂರಿನ ನಾಲ್ವರು ಹಾಗೂ ಒಬ್ಬ ಬೆಂಗಳೂರು ಮೂಲವದನು ಎಂದು ತಿಳಿದುಬಂದಿದೆ.
Next Story