ಬೆಳಗಾವಿ: ಮನೆ ಮೇಲೆ ದೈತ್ಯ ಗಾತ್ರದ ಮೊಸಳೆ!
ಬೆಳಗಾವಿ, ಆ.12: ಭಾರೀ ಪ್ರವಾಹದಿಂದ ಬಾಧಿತವಾಗಿರುವ ರಾಜ್ಯದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಗಜಗಾತ್ರದ ಮೊಸಳೆಯೊಂದು ಮಳೆ ನೀರಿನಿಂದ ಭಾಗಶಃ ಮುಳುಗಿದ್ದ ಮನೆ ಮೇಲೆ ಮಲಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೊಡ್ಡ ಗಾತ್ರದ ಮೊಸಳೆ ಮನೆ ಮೇಲೆ ಬಾಯಿ ಅಗಲಿಸಿಕೊಂಡು ಮಲಗಿರುವ ದೃಶ್ಯ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ಪ್ರವಾಹದಲ್ಲಿ ಮುಳುಗಿರುವ ಮನೆ ಮೇಲೆ ಮೊಸಳೆ ಮಲಗಿರುವ ದೃಶ್ಯವನ್ನು ಎಎನ್ಐ ಟ್ವಿಟರ್ನಲ್ಲಿ ಶೇರ್ ಮಾಡಿತ್ತು. ಕೆಲವೇ ಗಂಟೆಗಳಲ್ಲಿ 37,000ಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯೆ ನೀಡಿದ್ದಾರೆ.
Next Story