ಕೋಟ್ಯಾಂತರ ಮೌಲ್ಯದ 2,000 ರೂ. ಮುಖ ಬೆಲೆಯ ನಕಲಿ ನೋಟುಗಳು ಜಪ್ತಿ
ಚಾಮರಾಜನಗರ, ಆ.16: ಗೂಡ್ಸ್ ಆಟೋದಲ್ಲಿ ಸಾಗಿಸುತ್ತಿದ್ದ 2,000 ರೂ. ಮುಖ ಬೆಲೆಯ ನಕಲಿ ನೋಟುಗಳನ್ನು ಪತ್ತೆ ಹಚ್ಚಿರುವ ರಾಮಸಮುದ್ರ ಠಾಣೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ಅಟ್ಟಗೂಳಿಪುರದ ಸುವರ್ಣವತಿ ಜಲಾಶಯದ ಬಳಿ ಇಂದು ಮದ್ಯಾಹ್ನ ತಪಾಸಣಾ ಕಾರ್ಯದಲ್ಲಿದ್ದ ಪೊಲೀಸರನ್ನು ಕಂಡು ಆಟೋ ಚಾಲಕ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ. ಇದರಿಂದ ಸಂಶಯಗೊಂಡ ಪೊಲೀಸರು ಆತನನ್ನು ತಡೆದು ಆಟೋವನ್ನು ತಪಾಸಣೆ ಮಾಡಿದಾಗ ನಕಲಿ ನೋಟುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಮೂಲಗಳ ಪ್ರಕಾರ ಅಂದಾಜು 2 ರಿಂದ 3 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಕೊಳ್ಳಲಾಗಿದೆ ಎನ್ನಲಾಗಿದೆ.
Next Story