ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ದಾವಣಗೆರೆ, ಸೆ.26: ಅಪ್ರಾಪ್ತೆಯ ಅತ್ಯಾಚಾರ ಆರೋಪಿಗೆ ಇಲ್ಲಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ( ಪೋಕ್ಸೋ) ನ್ಯಾಯಾಧೀಶರಾದ ಎಸ್.ನಾಗಾಶ್ರೀ ಅವರು 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 40 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ .
ದಾವಣಗೆರೆ ತಾಲೂಕಿನ ಲೋಕಿಕರೆ ಗ್ರಾಮದ ವಿಜಯಕುಮಾರ್ ತನ್ನ ಸಂಬಂಧಿ, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಬಲವಂತವಾಗಿ ದೈಹಿಕ ಸಂಬಂಧ ಮಾಡಿದ್ದು, ಅಪ್ರಾಪ್ತೆ ಗರ್ಭಿಣಿಯಾಗಿದ್ದಳು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಹದಡಿ ಠಾಣೆಯಲ್ಲಿ ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಕಲಂ 6( ಪೋಕ್ಸೋ) ಪ್ರಕರಣ 2010 ಅಡಿ ಮತ್ತು 376 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿ ವಿರುದ್ಧ ಆರೋಪಣಾ ಪಟ್ಟಿ ಸಲ್ಲಿಸಿದ್ದು, ದೀರ್ಘ ವಿಚಾರಣೆ ನಡೆದ ನಂತರ ಆರೋಪಿ ತಪ್ಪಿತಸ್ಥ ಎಂದು ಸಾಬೀತಾಗಿದ್ದರಿಂದ ನ್ಯಾಯಾಧೀಶರು 10 ವರ್ಷ ಕಾರಾಗೃಹ ಶಿಕ್ಷೆ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.
ಸರಕಾರದ ಪರವಾಗಿ ಶೌಕತ್ ಆಲಿ ಎಸ್ಹೆಚ್ಎಸ್ ವಾದ ಮಂಡಿಸಿದ್ದರು.