ಮೂಡಿಗೆರೆ: ವಿವಾದಾತ್ಮಕ ಸುತ್ತೋಲೆ ಖಂಡಿಸಿ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಧರಣಿ | Vartha Bharati- ವಾರ್ತಾ ಭಾರತಿ

---

ಮೂಡಿಗೆರೆ: ವಿವಾದಾತ್ಮಕ ಸುತ್ತೋಲೆ ಖಂಡಿಸಿ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಧರಣಿ

ಮೂಡಿಗೆರೆ, ನ.15: ಸಂವಿಧಾನ ಆಚರಣೆ ಸಂಬಂಧ ರಾಜ್ಯ ಸರಕಾರ ಇತ್ತೀಚೆಗೆ ಸರಕಾರಿ ಶಾಲಾ ಕಾಲೇಜುಗಳಿಗೆ ಹೊರಡಿಸಿದ್ದ ಆದೇಶದಲ್ಲಿ ಉಲ್ಲೇಖಿಸಿರುವ "ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೇ ರಚಿಸಿಲ್ಲ" ಎಂಬ ಹೇಳಿಕೆ ಇದ್ದ ಸುತ್ತೋಲೆ ಖಂಡಿಸಿ ತಾಲೂಕು ಪರಿಶಿಷ್ಟ ಜಾತಿ/ಪಂಗಡ ಹಿತರಕ್ಷಾಣ ಸಮಿತಿಯ ನೂರಾರು ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಧರಣಿ ನಡೆಸಿದರು.

ಪಟ್ಟಣದ ಬಸ್ ನಿಲ್ದಾಣದ ವೃತ್ತದಿಂದ ರಾಜ್ಯ ಸರಕಾರ, ಸಿಎಂ ಯಡಿಯೂರಪ್ಪ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಸಮಿತಿಯ ಮುಖಂಡರು, ರಾಜ್ಯದ ಬಿಜೆಪಿ ತನ್ನ ಸರಕಾರ ಸಂವಿಧಾನ ವಿರೋಧಿ ನಿಲುವಿನ ಹಿಡನ್ ಅಜೆಂಡಾಗಳನ್ನು ರಾಜ್ಯಾದ್ಯಂತ ತೆರೆಮರೆಯಲ್ಲಿ ಹೇರಲು ಪ್ರಯತ್ನಿಸುತ್ತಿದೆ. ನಿಷ್ಕಲ್ಮಶ ಮನಸ್ಸಿನ ಮಕ್ಕಳ ಮೇಲೆ ಸಂವಿಧಾನ ವಿರೋಧಿ ಭಾವನೆ ಬಿತ್ತುವ ಉದ್ದೇಶದಿಂದ ರಾಜ್ಯ ಸರಕಾರ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೈಗೊಂಬೆಗಳನ್ನಾಗಿಸಿಕೊಂಡು ಜನ ವಿರೋಧಿ, ದಲಿತರ ವಿರೋಧಿ ಆಡಳಿತ ನೀಡುತ್ತಿದೆ. ಸರಕಾರದ ಇಂತಹ ನಿಲುವಿನ ವಿರುದ್ಧ ರಾಜ್ಯದ ಜನರು ಎಚ್ಚೆತ್ತುಕೊಂಡಿದ್ದು, ರಾಜ್ಯದ ನೈಜ ಸಮಸ್ಯೆಗಳನ್ನು ಮರೆ ಮಾಚಲು ಭಾವನಾತ್ಮಕ ವಿಷಯಗಳನ್ನು ಜನರ ಮಧ್ಯೆ ಹರಿಯಬಿಟ್ಟು ಒಡೆದಾಳುವ ಕೆಲಸಕ್ಕೆ ಕೈಹಾಕಿರುವ ಸರಕಾರಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಕಾದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ಸಂವಿಧಾನವನ್ನು ಬರೆದವರು ಯಾರೆಂಬುದು ಇಡೀ ಜಗತ್ತಿಗೆ ತಿಳಿದಿದೆ. ಸಂವಿಧಾನ ರಚಿಸಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಅದೆಷ್ಟು ಕಷ್ಟಪಟ್ಟಿದ್ದಾರೆ. ಎಷ್ಟು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿದ್ದಾರೆಂಬುದೂ ತಿಳಿದಿದೆ. ಆದರೆ ಈ ವಿಷಯ ಬಿಜೆಪಿ ಮತ್ತು ಆರೆಸ್ಸೆಸ್‍ನ ಕೋಮುವಾದಿಗಳಿಗೆ ಎಂದಿಗೂ ತಿಳಿಯಲು ಸಾಧ್ಯವಿಲ್ಲ. ಶೋಷಿತ ಸಮುದಾಯದ ಓರ್ವ ಮಹಾನ್ ಜ್ಞಾನಿ ಬರೆದ ಸಂವಿಧಾನದಡಿಯಲ್ಲಿ ಮನುವಾದಿಗಳು ಅಧಿಕಾರ ಚಲಾಯಿಸಬೇಕಾಗಿರುವುದನ್ನು ಸಂಘಪರಿವಾದ ಮನುವ್ಯಾದಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಕಾರಣಕ್ಕೆ ಸಂಘಿಗಳು ಕುತಂತ್ರ ಮೂಲಕ ವಿದ್ಯಾರ್ಥಿಗಳು, ಯುವಜನರ ತಲೆಯಲ್ಲಿ ಸುಳ್ಳನ್ನು ಬಿತ್ತಲು ಹವಣಿಸಿದ್ದಾರೆ ಎಂದರು.

ಶಾಲಾ ಕಾಲೇಜುಗಳಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಮೂಲಕ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ರಚಿಸಿಲ್ಲ, ಅವರು ಕರಡು ಸಮಿತಿ ಅಧ್ಯಕ್ಷರಾಗಿ ಮಾತ್ರ ಕಾರ್ಯ ನಿರ್ವಹಿಸಿದ್ದಾರೆ. ಉಳಿದ ಸದಸ್ಯರು ಬರೆದ ಸಂವಿಧಾನಕ್ಕೆ ಸಹಿಯನ್ನು ಮಾತ್ರ ಹಾಕಿದ್ದಾರೆಂಬ ಸುಳ್ಳನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬಲು ಕುತಂತ್ರ ಮಾಡಿದ್ದಾರೆ. ಇತಿಹಾಸ ತಿರುಚುವ ಕೆಲಸವನ್ನು ಬಿಜೆಪಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಮಾಡುತ್ತಿದ್ದು, ಜನಪರ ಆಡಳಿತ ನೀಡಲಾಗದ ಪಕ್ಷದ ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ದಿವಾಳಿಯನ್ನಾಗಿಸಿ ಈ ಸಂಬಂಧ ಜನ ಪ್ರಶ್ನೆ ಮಾಡಬಾರದೆಂಬ ಕಾರಣಕ್ಕೆ ಇಂತಹ ಭಾವನಾತ್ಮಕ ವಿಷಯನ್ನು ಜನರ ಮಧ್ಯೆ ಚರ್ಚೆಗೆ ಬಿಟ್ಟಿದೆ. ಈ ಮೂಲಕ ಸಮಾಜವನ್ನು ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರದ ಈ ದುರುದ್ದೇಶ ಪೂರಿತ ಸುತ್ತೋಲೆಯ ವಿರುದ್ಧ ರಾಜ್ಯದಾದ್ಯಂತ ಜನರು ಸಿಡಿದೇಳುವ ಸುಳಿವು ಸಿಕ್ಕಿದ ತಕ್ಷಣ ರಾಜ್ಯ ಸರಕಾರ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ನಾಟಕವಾಡುತ್ತಿದೆ. ಸರಕಾರದ ತಪ್ಪನ್ನು ಶಿಕ್ಷಣ ಇಲಾಖೆಯ ಮೇಲೆ ಹಾಕಿ ಜನರ ಆಕ್ರೋಶದಿಂದ ಬಚಾವಾಗಲು ಸಿಎಂ ಯಡಿಯೂರಪ್ಪ ಹುನ್ನಾರ ಮಾಡಿದ್ದಾರೆ. ಆದರೆ ಅವರ ಈ ಪ್ರಯತ್ನಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಸಂವಿಧಾನ ವಿರೋಧಿ ನಿಲುವಿಗೆ ಮುಂದಾದ ಎಲ್ಲ ಅಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ಕಾನೂನು ಕ್ರಮಕೈಗೊಂಡು ಜೈಲಿಗೆ ಕಳಿಸಬೇಕು. ತಪ್ಪಿದಲ್ಲಿ ಹೋರಾಟ ಇನ್ನೂ ಉಗ್ರ ಸ್ವರೂಪಕ್ಕೆ ತಿರುಗಲಿದೆ ಎಂದು ಮುಖಂಡರು ಇದೇ ವೇಳೆ ಎಚ್ಚರಿಸಿದರು.

ಧರಣಿ ಬಳಿಕ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿಪತ್ರವನ್ನು ಕಳಿಸಲಾಯಿತು. ಧರಣಿಯಲ್ಲಿ ಬಿಎಸ್ಪಿ ನಾಯಕ ಝಾಕಿರ್ ಹುಸೈನ್, ಮುಖಂಡರಾದ ಎಂ.ಎಸ್.ಅನಂತ್, ರಮೇಶ್ ಹೊಸಕೆರೆ, ಪ್ರಭಾಕರ್ ಬಿನ್ನಾಡಿ, ರತನ್ ಊರುಬಗೆ, ಲೋಕವಳ್ಳಿ ರಮೇಶ್, ಕೆ,ರಾಮಯ್ಯ, ಮಂಜಯ್ಯ, ರಾಮು ಪಾಲ್ಗೊಂಡಿದ್ದರು. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top