ವಿಧಾನ ಸಭೆಯ ಉಪ ಚುನಾವಣೆ: 11 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
ಬೆಂಗಳೂರು , ಡಿ.9: ವಿಧಾನ ಸಭೆಯ ಉಪ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, 15 ಕ್ಷೇತ್ರಗಳ ಮತ ಎಣಿಕೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 2 , ಜೆಡಿಎಸ್ 1ಮತ್ತು 1ರಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
*ಕಾಗವಾಡ: 7ನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ
*ಶಿವಾಜಿನಗರ: 2ನೇ ಸುತ್ತಿನಲ್ಲಿ ಕಾಂಗ್ರೆಸ್ ನ ರಿಝ್ವಾನ್ ಅರ್ಶದ್ ಮುನ್ನಡೆ
*ಚಿಕ್ಕಬಳ್ಳಾಪುರ: 7ನೇ ಸುತ್ತಿನಲ್ಲಿ ಬಿಜೆಪಿಯ ಡಾ. ಕೆ. ಸುಧಾಕರ್ ಮುನ್ನಡೆ
*ಯಲ್ಲಾಪುರ :11ನೇ ಕ್ಷೇತ್ರದಲ್ಲಿ ಬಿಜೆಪಿಯ ಶಿವರಾಮ್ ಹೆಬ್ಬಾರ್ 21,665 ಮತಗಳ ಮುನ್ನಡೆ ಸಾಧಿಸಿದ್ದಾರೆ.
*ಅಥೆಣಿ ಕ್ಷೇತ್ರದಲ್ಲಿ ತಾಂತ್ರಿಕ ಸಮಸ್ಯೆ: 3ನೇ ಸುತ್ತಿನ ಮತ ಎಣಿಕೆ ಸ್ಥಗಿತ
*ರಾಣೆಬೆನ್ನೂರು: 5ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ
*ಕಾಗವಾಡ: 6ನೇ ಸುತ್ತಿನಲ್ಲೂ ಬಿಜೆಪಿಯ ಶ್ರೀಮಂತ ಪಾಟೀಲ್ ಮುನ್ನಡೆ
*ಯಲ್ಲಾಪುರ: 10ನೇ ಸುತ್ತಿನಲ್ಲೂ ಶಿವರಾಮ್ ಹೆಬ್ಬಾರ್ ಮುನ್ನಡೆ
*ಹೊಸಕೋಟೆ: 3ನೇ ಸುತ್ತಿನಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮುನ್ನಡೆ
*ಯಲ್ಲಾಪುರ: 9ನೇ ಸುತ್ತಿನಲ್ಲೂ ಶಿವರಾಮ್ ಹೆಬ್ಬಾರ್ ಮುನ್ನಡೆ
*ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿಯ ಬಿ.ಸಿ. ಪಾಟೀಲ್ ಮುನ್ನಡೆ
*ಚಿಕ್ಕಬಳ್ಳಾಪುರದಲ್ಲಿ 5ನೇ ಸುತ್ತಿನಲ್ಲೂ ಬಿಜೆಪಿಯ ಡಾ.ಕೆ. ಸುಧಾಕರ್ ಮುನ್ನಡೆ
*ಶಿವಾಜಿನಗರದಲ್ಲಿ ಕಾಂಗ್ರೆಸ್ ನ ರಿಝ್ವಾನ್ ಅಭ್ಯರ್ಥಿ ಮುನ್ನಡೆ
* ವಿಜಯನಗರದಲ್ಲಿ ಆನಂದ್ ಸಿಂಗ್ 3ನೇ ಸುತ್ತಿನಲ್ಲೂ ಮುನ್ನಡೆ
* ಯಲ್ಲಾಪುರದಲ್ಲಿ 8ನೇ ಸುತ್ತಿನಲ್ಲೂ ಶಿವರಾಮ್ ಹೆಬ್ಬಾರ್ ಮೇಲುಗೈ ಸಾಧಿಸಿದ್ದಾರೆ.
* ಗೋಕಾಕ್ ನಲ್ಲಿ 3ನೇ ಸುತ್ತಿನಲ್ಲೂ ಬಿಜೆಪಿಯ ರಮೇಶ್ ಜಾರಕಿಹೊಳಿ ಮುನ್ನಡೆ
*ಮಹಾಲಕ್ಷ್ಮೀ ಲೇಔಟ್ ನಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ.
*ಚಿಕ್ಕಬಳ್ಳಾಪುರದಲ್ಲಿ 3ನೇ ಸುತ್ತಿನಲ್ಲೂ ಬಿಜೆಪಿಯ ಡಾ. ಕೆ. ಸುಧಾಕರ್ ಮುನ್ನಡೆ
* ಕೆಆರ್ ಪೇಟೆ 3ನೇ ಸುತ್ತಿನಲ್ಲೂ ಜೆಡಿಎಸ್ ಮುನ್ನಡೆ
*ಕಾಗವಾಡ 4 ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ
*ಯಲ್ಲಾಪುರದಲ್ಲಿ ಬಿಜೆಪಿಯ ಶಿವರಾಮ್ ಹೆಬ್ಬಾರ್ 6ನೇ ಸುತ್ತಿನಲ್ಲೂ ಮುನ್ನಡೆ
*ಕಾಗವಾಡ3ನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಮುನ್ನಡೆ
*ಯಲ್ಲಾಪುರದಲ್ಲಿ 5ನೇ ಸುತ್ತು: ಬಿಜೆಪಿಯ ಶಿರಾಮ್ ಹೆಬ್ಬಾರ್ 10, 716 ಮತಗಳ ಮುನ್ನಡೆ
*ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ
* ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ 4493 ಮತಗಳ ಮುನ್ನಡೆ
*ಕೆಆರ್ ಪೇಟೆಯಲ್ಲಿ ಬಿಜೆಪಿಯ ಅಭ್ಯರ್ಥಿ ಮುನ್ನಡೆ
*ಕಾಗವಾಡದಲ್ಲಿ ಬಿಜೆಪಿಯ ಶ್ರೀಮಂತ ಪಟೇಲ್ 4705 ಮತಗಳ ಮುನ್ನಡೆ
ಯಶವಂತಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಮುನ್ನಡೆ
*ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ
*ಗೋಕಾಕ್ ಬಿಜೆಪಿಯ ರಮೇಶ್ ಜಾರಕಿಹೊಳಿಗೆ 2ನೇ ಸುತ್ತಿನಲ್ಲೂ ಮುನ್ನಡೆ
*ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಡಾ. ಸುಧಾಕರ 2ನೇ ಸುತ್ತಿನಲ್ಲಿ ಮುನ್ನಡೆ
*ಅಥಣಿಯಲ್ಲಿ ಮಹೇಶ್ ಕುಮಟಿಹಳ್ಳಿ 6,427 ಮತಗಳ ಮುನ್ನಡೆ