ಬಾಯ್ಲರ್ ಸ್ಫೋಟ: ಮೂವರು ಕಾರ್ಮಿಕರಿಗೆ ಗಾಯ
ಶಿವಮೊಗ್ಗ, ಡಿ. 12: ಹೋಟೆಲ್ವೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಮೂವರು ಕಾರ್ಮಿಕರು ಗಾಯಗೊಂಡಿರುವ ಘಟನೆ ನಗರದ ಎಲ್ಎಲ್ಆರ್ ರಸ್ತೆಯಲ್ಲಿ ನಡೆದಿದೆ.
ಶುಭಂ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ. ಹೋಟೆಲ್ ಅಡುಗೆಗೆ ಬಳಸುವ ಸ್ಟೀಂ ಬಾಯ್ಲರ್ ಸ್ಫೋಟಗೊಂಡಿದ್ದು ಸೊರಬದ ಮುದುಡವಳಿಗೆ ಪ್ರವೀಣ್ (18) ತೀವ್ರ ಗಾಯಗೊಂಡಿದ್ದಾರೆ. ಮೀನಮ್ಮ ಹಾಗೂ ಸುರೇಂದ್ರ ಭಟ್ಟ ಅವರಿಗೆ ಸಣ್ಣ ಗಾಯಗಳಾಗಿವೆ.
ಸ್ಫೋಟದ ಶಬ್ದಕ್ಕೆ ಹೋಟೆಲ್ ಗ್ರಾಹಕರು ಹಾಗೂ ಸುತ್ತ ಮುತ್ತಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Next Story