ರಾಜ್ಯದ 11 ಪಂಚಾಯತ್ ಸದಸ್ಯ ಸ್ಥಾನಗಳಿಗೆ ಫೆ.9 ರಂದು ಉಪ ಚುನಾವಣೆ
ಬೆಂಗಳೂರು, ಜ.14: ವಿವಿಧ ಕಾರಣಗಳಿಂದ ತೆರವುಗೊಂಡಿರುವ ರಾಜ್ಯದ ಹನ್ನೊಂದು ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸದಸ್ಯ ಸ್ಥಾನಗಳಿಗೆ ಫೆ.9 ರಂದು ಉಪ ಚುನಾವಣೆ ನಡೆಯಲಿದೆ.
ಹುಕ್ಕೇರಿ ತಾಲೂಕಿನ ಹೆಬ್ಬಾಳ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಉಳಿದಂತೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ, ಚನ್ನಪಟ್ಟಣ ತಾಲೂಕಿನ ಮತ್ತಿಕೆರೆ, ಮಾಲೂರು ತಾಲೂಕಿನ ಲಕ್ಕೂರು, ಚಿಂತಾಮಣಿ ತಾಲೂಕಿನ ಕುರುಬೂರು, ಗೌರಿಬಿದನೂರು ತಾಲೂಕಿನ ಅಲಕಾಪುರ, ಗಂಗಸಂದ್ರ, ಶ್ಯಾಂಪುರ, ರಾಮದುರ್ಗ ತಾಲೂಕಿನ ಕಟಕೋಳ, ಹಾನಗಲ್ ತಾಲೂಕಿನ ತಿಳವಳ್ಳಿ, ಸಿರಗುಪ್ಪ ತಾಲೂಕಿನ ಕರೂರು ತಾಲೂಕು ಪಂಚಾಯತ್ ಕ್ಷೇತ್ರಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
Next Story