ಹನೂರು: ಟ್ರ್ಯಾಕ್ಟರ್ ಢಿಕ್ಕಿ; ಮಹಿಳೆ ಮೃತ್ಯು
ಹನೂರು, ಮಾ.20: ಟ್ರ್ಯಾಕ್ಟರ್ ಹರಿದು ಮಹಿಳೆ ಮೃತಪಟ್ಟ ಘಟನೆ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಬಳಿ ನಡೆದಿದೆ
ಕೆಂಪಯ್ತನಶೆಟ್ಟಿ ಗ್ರಾಮದ ವರದಮ್ಮ (70) ಮೃತ ಮಹಿಳೆ.
ಸಂಬಂಧಿಯ ಬೈಕಿನಲ್ಲಿ ತೆರಳುವಾಗ ಆಯತಪ್ಪಿ ಬಿದ್ದ ಮಹಿಳೆ ಮೇಲೆ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಹರಿದಿದ್ದು, ಪರಿಣಾಮ ಸ್ಥಳದಲ್ಲಿಯೇ ವರದಮ್ಮ ಮೃತಪಟ್ಟಿದ್ದಾರೆ.
ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
Next Story