ಲಾಕ್ ಡೌನ್ ಆದೇಶ ಉಲ್ಲಂಘನೆ: ಶಿವಮೊಗ್ಗದಲ್ಲಿ 176 ಬೈಕ್ ಗಳು ವಶಕ್ಕೆ
ಶಿವಮೊಗ್ಗ : ಲಾಕ್ ಡೌನ್ ಆದೇಶ ಉಲ್ಲಂಘಿಸಿ ಅನಾವಶ್ಯಕವಾಗಿ ಬೈಕ್’ಗಳಲ್ಲಿ ಸಿಟಿ ರೌಂಡ್ಸ್ ಹೊಡೆಯುತ್ತಿದ್ದ ಯುವಕರಿಗೆ ಶಿವಮೊಗ್ಗ ಪೊಲೀಸರು ಕೇಸ್ ದಾಖಲು ಮಾಡಿ, 176 ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾ. 27 ಮತ್ತು 28ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾರಣವಿಲ್ಲದೆ ಬೈಕ್’ನಲ್ಲಿ ಸುತ್ತುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ರೌಂಡ್ಸ್ ಹೊಡೆಯಲು ಬಳಸಿದ್ದ 176 ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊರೋನ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ಲಾಕ್’ಡೌನ್ ಘೋಷಿಸಲಾಗಿದೆ. ಈ ವೇಳೆ ತುರ್ತು ಮತ್ತು ಅನಿವಾರ್ಯ ಕಾರಣವಿದ್ದರಷ್ಟೇ ಮನೆಯಿಂದ ಹೊರಬರಬೇಕು ಎಂದು ಸೂಚಿಸಲಾಗಿದೆ.
Next Story