ಮೈಸೂರಿನಲ್ಲಿ ಮತ್ತಿಬ್ಬರಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ
ಮೈಸೂರು,ಮಾ.31: ಮಂಗಳವಾರ ನಂಜನಗೂಡಿನ ಖಾಸಗಿ ಕಂಪನಿಯ ಮತ್ತಿಬ್ಬರು ನೌಕರರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಒಟ್ಟು ಕೊರೋನ ಸೋಂಕಿತರ ಸಂಖ್ಯೆ 14ಕ್ಕೆ ಏರಿದೆ.
ಮೊದಲಿಗೆ ಮೈಸೂರಿನಲ್ಲಿ ವಿದೇಶದಿಂದ ಬಂದ ಇಬ್ಬರು ಕೊರೋನಾ ಸೋಂಕಿಗೆ ಒಳಗಾದರು. ನಂತರ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಯ ನೌಕರನೊಬ್ಬನಿಗೆ ಕೊರೋನ ಸೋಂಕು ಕಂಡುಬಂದಿತ್ತು. ಮತ್ತೆ ಅದೇ ಕಂಪನಿಯ ನಂಜನಗೂಡು ನಗರದ ಹಲವು ಬಡವಾಣೆಗಳ ಐದು ಮಂದಿ ಕೊರೋನ ಸೋಂಕಿಗೆ ಒಳಗಾಗಿದ್ದರು.
Next Story