4 ಟನ್ ರಕ್ತಚಂದನ ದಿಮ್ಮಿಗಳ ವಶ
ಬೆಂಗಳೂರು, ಮೇ 24: ಬೆಂಗಳೂರು ಗ್ರಾಮಾಂತರದ ತಿರುಮಲಶೆಟ್ಟಿಹಳ್ಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 4 ಟನ್ ರಕ್ತಚಂದನ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ತೋಟದ ಬಾವಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ರಕ್ತಚಂದನ ದಿಮ್ಮಿಗಳು ಪತ್ತೆಯಾಗಿದೆ. ಆರೋಪಿ ಅಯಾಝ್ ಪರಾರಿ ಯಾಗಿದ್ದಾನೆ.
ಈ ಸಂಬಂಧ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story