ಪರಾರಿಯಾಗಿದ್ದ ವ್ಯಕ್ತಿ ಮತ್ತೆ ಐಸೋಲೇಷನ್ ಗೆ ದಾಖಲು
ಸಾಂದರ್ಭಿಕ ಚಿತ್ರ
ಮಂಡ್ಯ, ಎ.6: ನಗರದ ಮಿಮ್ಸ್ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಿಂದ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಈ ವ್ಯಕ್ತಿಯನ್ನು ಮಳವಳ್ಳಿಯ ಆತನ ಮನೆಯಿಂದ ಕರೆತಂದು ಮಿಮ್ಸ್ ನ ಐಸೋಲೇಷನ್ ವಾರ್ಡ್ ಗೆ ದಾಖಲು ಮಾಡಿ ನಿಗಾವಹಿಸಲಾಗಿತ್ತು. ಆದರೆ ಸೋಮವಾರ ಬೆಳಗ್ಗೆ ಮಿಮ್ಸ್ ಆಸ್ಪತ್ರೆಯಿಂದ ಪರಾರಿಯಾಗಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಈತನನ್ನು ನಗರದ ಶಂಕರ ನಗರದ ಬಡಾವಣೆಯೊಂದರಲ್ಲಿ ಪತ್ತೆಹಚ್ಚಿದ್ದಾರೆ.
ಸದ್ಯ ಈತನನ್ನು ಮಿಮ್ಸ್ ನ ಐಸೋಲೇಷನ್ ವಾರ್ಡಿನಲ್ಲಿ ಮತ್ತೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
Next Story