ಮಂಡ್ಯ: ಮೂವರಿಗೆ ಕೊರೋನ ಸೋಂಕು ಧೃಡ
ಮಂಡ್ಯ, ಎ.7: ಜಿಲ್ಲೆಯ ಮಳವಳ್ಳಿಯ ಮೂರು ಮಂದಿಗೆ ಕೊರೋನ ಸೋಂಕು ಧೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 32 ವರ್ಷದ ವ್ಯಕ್ತಿ, 36 ವರ್ಷದ ವ್ಯಕ್ತಿ ಹಾಗೂ 65 ವರ್ಷದ ವ್ಯಕ್ತಿಗೆ ಕೊರೋನ ಸೋಂಕು ತಗಲಿದೆ ಎಂದರು.
ಧರ್ಮ ಪ್ರಚಾರಕರ ಸಂಪರ್ಕದಲ್ಲಿದ್ದ ಮಳವಳ್ಳಿಯ 7 ಹಾಗೂ ನಾಗಮಂಗಲದ 5 ಒಟ್ಟು 12 ಮಂದಿಯನ್ನು ಐಸೋಲೇಷನ್ ನಲ್ಲಿ ಇರಿಸಲಾಗಿತ್ತು. ಈ ಪೈಕಿ ಮೂವರಿಗೆ ಸೋಂಕು ತಗುಲಿದ್ದು, ಏಳು ಮಂದಿಗೆ ನೆಗೆಟಿವ್ ಬಂದಿದೆ ಎಂದು ಅವರು ಹೇಳಿದರು.
ಆದರೆ, ಉಳಿದ ಇಬ್ಬರ ವರದಿ ಬಂದಿಲ್ಲ ಎಂದು ಅವರು ತಿಳಿಸಿದರು.
Next Story