ಗ್ರೀನ್ ಝೋನ್ ನಲ್ಲಿದ್ದ ಕೋಲಾರದಲ್ಲಿ ಇಂದು ಐವರಿಗೆ ಕೊರೋನ ಸೋಂಕು ದೃಢ
ಸಾಂದರ್ಭಿಕ ಚಿತ್ರ
ಕೋಲಾರ, ಮೇ.11: ಇಲ್ಲಿಯ ತನಕ ಗ್ರೀನ್ ಝೋನ್ ಆಗಿದ್ದ ಕೋಲಾರದಲ್ಲಿ ಐದು ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ವಾಪಸ್ಸು ಬಂದಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಐವರಿಗೆ ಕೊರೋನ ಸೋಂಕು ಪತ್ತೆಯಾಗಿದೆ.
ಸೋಂಕಿತರ ಪೈಕಿ ಒರಿಸ್ಸಾದಿಂದ ಹಿಂದಿರುಗಿದ್ದ ಇಬ್ಬರು ಯುವಕರು ಮತ್ತು ಚೆನ್ನೈನಿಂದ ಹಿಂದಿರುಗಿದ್ದ ಓರ್ವ ಯುವಕನಲ್ಲಿ ಕೊರೋನ ಪಾಸಿಟಿವ್ ಬಂದಿವೆ. ಉಳಿದಂತೆ ಇಬ್ಬರ 70 ವರ್ಷದ ವೃದ್ಧೆ ಮತ್ತು 22 ವರ್ಷದ ಯುವತಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ವರದಿಯಲ್ಲಿ ತಿಳಿಸಿದೆ.
Next Story