ಮಡಿಕೇರಿ: ಸೌದೆ ತರಲು ಹೋಗಿದ್ದ ಮಹಿಳೆಯ ಅತ್ಯಾಚಾರ; ಆರೋಪ
ಇಬ್ಬರ ಬಂಧನ
ಮಡಿಕೇರಿ, ಮೇ.17: ಸೌದೆ ತರಲು ಹೋಗಿದ್ದ ಮಹಿಳೆ ಮೇಲೆ ಇಬ್ಬರು ಅತ್ಯಾಚಾರ ಎಸಗಿರುವ ಘಟನೆ ಮಡಿಕೇರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ ಎಂದು ಆರೋಪಿಸಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾವೂರು ಗ್ರಾಮದ ಚಿದಾನಂದ ಹಾಗೂ ಚೇತನ್ ಬಂಧಿತ ಆರೋಪಿಗಳು.
ವಿವಾಹಿತ ಮಹಿಳೆಯೊಬ್ಬರು ಸೌದೆ ತರಲು ತೆರಳಿದ್ದಾಗ ಮಹಿಳೆ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ವೇಳೆ ವಿಡಿಯೋ ಕೂಡಾ ಮಾಡಿಕೊಂಡಿದ್ದಾರೆ. ನಂತರ ಈ ವಿಷಯವನ್ನು ಬಹಿರಂಗ ಪಡಿಸಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಭಯದಿಂದ ಮಹಿಳೆ ಸುಮ್ಮನಿದ್ದರೂ ಕೆಲವು ದಿನಗಳ ಬಳಿಕ ಆರೋಪಿಗಳು ವಿಡಿಯೋ ವೈರಲ್ ಮಾಡಿದ್ದಾರೆ. ವೈರಲ್ ವಿಡಿಯೋ ವಿಚಾರ ತಿಳಿದು ಮಹಿಳೆ ಮಡಿಕೇರಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದೂರು ಆಧರಿಸಿ ಅತ್ಯಾಚಾರ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ಕಾನೂನು ಕ್ರಮ ಕೈಗೊಂಡಿದ್ದಾರೆ.
Next Story