ಮಡಿಕೇರಿ: ಕೋರೆಯಲ್ಲಿ ವೃದ್ಧನ ಮೃತದೇಹ ಪತ್ತೆ
ಮಡಿಕೇರಿ, ಮೇ 18 : ಮೂರ್ನಾಡಿನ ಪೆಬ್ಬೆಟ್ಟಿಯಲ್ಲಿ ವೃದ್ಧರೊಬ್ಬರ ಶವ ಪತ್ತೆಯಾಗಿದೆ. ಐಕೊಳ ಸಮೀಪದ ಕೋರೆಯಲ್ಲಿ ಬೆಳಗ್ಗಿನ ಜಾವ ಮೃತದೇಹ ಪತ್ತೆಯಾಗಿದೆ. ಮೃತ ವೃದ್ಧನನ್ನು ಚಿಮ್ಮಿ ಎಂದು ಗುರುತಿಸಲಾಗಿದ್ದು, ಕಾಲು ಜಾರಿ ಕೋರೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಲೈನ್ ಮನೆಯೊಂದರಲ್ಲಿ ವಾಸವಿದ್ದ ಚಿಮ್ಮಿ ಕುಟುಂಬದವರಿಂದ ದೂರವಾಗಿ ಒಂಟಿಯಾಗಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಮೂರ್ನಾಡು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story