ವೋಲ್ವೋ ಬಸ್ ಸಂಚಾರಕ್ಕೆ ರಾಜ್ಯ ಸರಕಾರ ಅನುಮತಿ
ಬೆಂಗಳೂರು, ಮೇ 29: ಹವಾನಿಯಂತ್ರಿತ ವೋಲ್ವೋ ಬಸ್ ಗಳ ಸಂಚಾರಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದೆ.
ಕೊರೋನ ಲಾಕ್ಡೌನ್ ಹಿನ್ನೆಲೆ ಬಸ್ ಸಂಚಾರಕ್ಕೆ ತಡೆ ನೀಡಲಾಗಿತ್ತು. ಲಾಕ್ಡೌನ್ ಸಡಿಲಿಕೆ ಬಳಿಕ ಸಾಮಾನ್ಯ ಬಸ್ ಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು. ಇದೀಗ ವೋಲ್ವೋ ಬಸ್ ಗಳನ್ನು ಕೂಡ ರಸ್ತೆಗಿಳಿಸಲು ಸರಕಾರ ನಿರ್ಧಾರ ಮಾಡಿದೆ.
ಲಾಕ್ಡೌನ್ ನಿಯಮಗಳನ್ನು ಹಂತಹಂತವಾಗಿ ಸಡಿಲಗೊಳಿಸಿ ಈಗಾಗಲೇ ದೇಶಿ ವಿಮಾನ ಹಾಗೂ ರಾಜ್ಯದೊಳಗಿನ ರೈಲ್ವೆ ಸೇವೆ ಆರಂಭಿಸಲಾಗಿದೆ. ಐಟಿಬಿಟಿ ಕಂಪನಿಗಳು ಸೇರಿದಂತೆ ಎಲ್ಲಾ ಇಲಾಖೆಗಳು ತೆರೆದಿವೆ. ಈ ಹಿನ್ನೆಲೆ ಹವಾನಿಯಂತ್ರಿತ ವಜ್ರ ಮತ್ತು ವಾಯುವಜ್ರ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
Next Story