ಕೊರೋನ ಸೋಂಕಿತ ಮಹಿಳೆಗೆ ಗರ್ಭಪಾತ: ವೈದ್ಯರ ನಿರ್ಲಕ್ಷ್ಯ ಆರೋಪ
ರಾಯಚೂರು, ಜೂ.9: ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಗರ್ಭಿಣಿಗೆ ಗರ್ಭಪಾತವಾಗಿದೆ ಎಂದು ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕಷ್ಣ ಮಾಹಿತಿ ನೀಡಿದ್ದಾರೆ.
ಮೂರು ತಿಂಗಳ ಗರ್ಭಿಣಿ ರಾಯಚೂರಿನ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿದ್ದರು. ಸೋಮವಾರ ರಾತ್ರಿ ತೀವ್ರ ರಕ್ತಸ್ರಾವವಾಗಿ ಗರ್ಭಿಣಿ ನರಳಾಡಿದ್ದರು. ರವಿವಾರ ರಾತ್ರಿಯಿಂದಲೇ ರಕ್ತಸ್ರಾವವಾಗುತ್ತಿದ್ದರೂ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಗರ್ಭಿಣಿಗೆ ಚಿಕಿತ್ಸೆ ನೀಡುವಂತೆ ಕೋವಿಡ್ ವಾರ್ಡ್ನಲ್ಲಿದ್ದ ರೋಗಿಗಳು ಮಧ್ಯಾಹ್ನದ ಊಟ ಬಿಟ್ಟು ಪ್ರತಿಭಟನೆ ಮಾಡಿದ್ದರು. ರೋಗಿಗಳ ಆಕ್ರೋಶಕ್ಕೆ ಮಣಿದು ಗರ್ಭಿಣಿಯನ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇದೀಗ ತೀವ್ರ ರಕ್ತಸ್ರಾವದಿಂದ ಗರ್ಭಪಾತವಾಗಿದೆ. ಸೋಂಕಿತ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಯಾವುದೇ ಅಪಾಯವಿಲ್ಲ ಎಂಬುದಾಗಿ ತಿಳಿದು ಬಂದಿದೆ.
Next Story