ಮೊಬೈಲ್ ಗೇಮ್ ಗೀಳು: ಟಾಸ್ಕ್ ಪೂರ್ಣಗೊಳಿಸಲು ಹೋಗಿ ಪ್ರಾಣ ಕಳೆದುಕೊಂಡ ಮೈಸೂರಿನ ಬಾಲಕ
ಸಾಂದರ್ಭಿಕ ಚಿತ್ರ
ಮೈಸೂರು,ಜೂ.12: ಮೊಬೈಲ್ ಗೇಮ್ ಆಡುವ ಹವ್ಯಾಸ ಇಟ್ಟುಕೊಂಡಿದ್ದ 14 ವರ್ಷದ ಬಾಲಕನೊಬ್ಬ ಮೊಬೈಲ್ ಗೇಮ್ ನಲ್ಲಿ ತಿಳಿಸಿದ ಟಾಸ್ಕ್ ಪೂರೈಸಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
9ನೇ ತರಗತಿ ಓದುತ್ತಿದ್ದ ಬಾಲಕ ಯಾವಾಗಲೂ ಮೊಬೈಲ್ನಲ್ಲಿ ಗೇಮ್ವೊಂದನ್ನು ಆಡುತ್ತಿದ್ದ. ಅದರಲ್ಲಿ ನೀಡುತ್ತಿದ್ದ ಟಾಸ್ಕ್ ಅನ್ನು ಪೂರ್ಣಗೊಳಿಸುತ್ತಿದ್ದ. ಇದೇ ರೀತಿ ಮಾಡಲು ಹೋದ ಬಾಲಕ ಶೆಟರ್ ಎಳೆಯುವ ತಂತಿಯೊಂದಿಗೆ ಪ್ರಯೋಗಕ್ಕೆ ಇಳಿದಿದ್ದಾನೆ. ಈ ವೇಳೆ ತಂತಿಯು ಕುತ್ತಿಗೆಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.
ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story