ಕಾರವಾರ: ಕೊರೋನ ಸೋಂಕಿತರ ಪೈಕಿ ರವಿವಾರ ಏಳು ಮಂದಿ ಬಿಡುಗಡೆ
ಕಾರವಾರ,ಜೂ.21:ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನ ಸೋಂಕಿತರ ಪೈಕಿ ರವಿವಾರ ಏಳು ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ
ಶಿರಸಿ ಮೂಲದ 63 ವರ್ಷದ ಮಹಿಳೆ, 62ರ ವ್ಯಕ್ತಿ, ಜೊಯಿಡಾದ 24ರ ಮಹಿಳೆ, ದಾಂಡೇಲಿಯ 9ರ ಬಾಲಕಿ, ಹಳಿಯಾಳ ಮೂಲದ 12 ವರ್ಷದ ಬಾಲಕ ಹಾಗೂ 45ರ ವ್ಯಕ್ತಿ, ಕುಮಟಾ ಮೂಲದ 35ರ ವ್ಯಕ್ತಿ ಗುಣಮುಖವಾಗಿದ್ದು ರವಿವಾರ ಬಿಗಡೆಯಾಗಿದ್ದಾರೆ.
ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ಗಜಾನನ ನಾಯಕ, ಡಾ.ಮುನಿಯಪ್ಪ, ಡಾ ಮಂಜುನಾಥ್ ಭಟ್, ಡಾ. ವೆಂಕಟೇಶ್ ರಾವ್ ಹಾಗೂ ಸಿಬ್ಬಂದಿಗಳು ಬಿಡುಗಡೆ ವೇಳೆ ಹಾಜರಿದ್ದರು.
ಕಾರವಾರ ವೈದ್ಯಕೀಯ ಕಾಲೇಜಿನ ಕೋವಿಡ್ 19 ವಾರ್ಡಿನಲ್ಲಿ 118 ಜನ ಸೋಂಕಿತರಿದ್ದು, ಈವರೆಗೆ 87 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಕುಂದಾಪುರ ಮೂಲದ ಇಬ್ಬರಿಗೆ ಕಿಮ್ಸ್ ಕಾಲೇಜಿನಲ್ಲಿಯೇ ಚಿಕಿತ್ಸೆ ನೀಡಿ ಗುಣಮುಖ ಮಾಡಲಾಗಿದೆ. ಒಟ್ಟು ಗುಣಮುಖರಾದವರ ಸಂಖ್ಯೆ 100ರ ಗಡಿ ದಾಡಿ ದಾಟಿದೆ.
Next Story