ಕೆಪಿಎಸ್ಸಿಯಿಂದ ಖಾಲಿ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜು.6: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಗ್ರೂಪ್ 'ಎ' ತಾಂತ್ರಿಕ ಮತ್ತು ಗ್ರೂಫ್ 'ಬಿ' ತಾಂತ್ರಿಕ ಹಾಗೂ ತಾಂತ್ರಿಕೇತರ ವೃಂದದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.
ಸದರಿ ಹುದ್ದೆಗಳಲ್ಲಿ ಹೈದ್ರಾಬಾದ್ ಕರ್ನಾಟಕ ವೃಂದಕ್ಕೆ ಮೀಸಲಾತಿಇರುವುದು. ಗ್ರೂಪ್ 'ಎ' ಹುದ್ದೆಗಳಿಗೆ 52,650- 97,100 ಹಾಗೂ ಗ್ರೂಫ್ 'ಬಿ' ಹುದ್ದೆಗಳಿಗೆ 45,300- 88,300 ವೇತನವನ್ನು ನಿಗದಿಪಡಿಸಲಾಗಿದೆ.
ಹುದ್ದೆಗಳ ವಿವರ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ 41 ಹುದ್ದೆಗಳು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ 17 ಹುದ್ದೆಗಳು, ಪೌರಾಡಳಿತ ನಿರ್ದೇಶನಾಲಯದ 5 ಹುದ್ದೆಗಳು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಔಷಧ ನಿಯಂತ್ರಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿನ 4 ಹುದ್ದೆಗಳು ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ 184 ಹುದ್ದೆಗಳು ಖಾಲಿಯಿವೆ.
ವಿದ್ಯಾರ್ಹತೆ: ಆಯಾ ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ವಯಸ್ಸು ಕನಿಷ್ಠ-21 ಹಾಗೂ ಗರಿಷ್ಠ-40 ವರ್ಷ ನಿಗದಿ ಮಾಡಲಾಗಿದೆ. ಸರಕಾರದ ನಿಯಮಗಳ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ಗೆ ಬೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅರ್ಜಿಯನ್ನು ಮೂರು ಹಂತಗಳಲ್ಲಿ ಭರ್ತಿ ಮಾಡಬೇಕು. ಅರ್ಜಿಯನ್ನು ಜು.10 ರಿಂದ ಆ.10 ರೊಳಗೆ ಸಲ್ಲಿಸಬೇಕಾಗಿದೆ.
ಅಧಿಸೂಚನೆಯನ್ನು ttp://www.kpsc.kar.nic.in/NOTIFICATION Gr A&B TECHNICAL 24-6-2020.pdf ನೋಡಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕೆಪಿಎಸ್ಸಿ ವೆಬ್ಸೈಟ್ www.kpsc.kar.nic.in ನೋಡಬಹುದಾಗಿದೆ.