ಹಾಸನ: ಇಬ್ಬರು ಪತ್ರಕರ್ತರಲ್ಲಿ ಕೋವಿಡ್ ಸೋಂಕು ದೃಢ
ಹಾಸನ, ಜು.8: ಹಾಸನ ನಗರದಲ್ಲಿ ಇಬ್ಬರು ಪತ್ರಕರ್ತರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
ಶನಿವಾರ ಗಂಟಲದ್ರವದ ಪರೀಕ್ಷೆ ಟೆಸ್ಟ್ ಮಾಡಿಸಿದ್ದ ಪತ್ರಕರ್ತರಲ್ಲಿ ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರಿಗೆ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ.
ಈ ನಡುವೆ ವಾರ್ತಾ ಇಲಾಖೆಯ ಕಚೇರಿ ಹಾಗೂ ಹಾಸನ ಪತ್ರಕರ್ತರ ಭವನಗಳನ್ನು ಮುಚ್ಚಿ ಸ್ಯಾನಿಟೈಸ್ ಮಾಡಲು ಜಿಲ್ಲಾಡಳಿತ ಸೂಚನೆ ನೀಡಿದೆ. ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ಮತ್ತೊಂದು ಸುತ್ತಿನ ಕೊರೋನ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
Next Story