ಕೊರೋನ ವೈರಸ್: ರಾಜ್ಯದ ಮತ್ತೊಬ್ಬರು ಶಾಸಕರಿಗೆ ಪಾಸಿಟಿವ್
ಕಲಬುರಗಿ, ಜು.9: ಕಲಬುರಗಿ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಸದ್ಯ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಇರುವ ಶಾಸಕರು ಇತ್ತೀಚೆಗೆ ಕೆಲವು ಬಿಜೆಪಿ ಮುಖಂಡರಿಗೆ ಕೊರೋನ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ತಪಾಸಣೆಗೆ ಒಳಪಟ್ಟಿದ್ದರು. ಇದೀಗ ಕೊರೋನ ಪರೀಕ್ಷೆಯ ವರದಿ ಬಂದಿದ್ದು, ಶಾಸಕರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಶಾಸಕರ ಆಪ್ತ ಸಹಾಯಕರಿಗೆ ಎರಡು ದಿನಗಳ ಹಿಂದೆ ಕೊರೋನ ದೃಢಪಟ್ಟಿದ್ದರಿಂದ ಶಾಸಕರೂ ಪರೀಕ್ಷೆಗೆ ಒಳಗಾಗಿದ್ದರು. ಹೀಗಾಗಿ, ಕೊರೋನ ಇರುವುದು ಗೋತ್ತಾಗಿದೆ.
Next Story