ಕೊಡಗು: ಕೊರೋನ ಸೋಂಕಿಗೆ ವೃದ್ಧೆ ಬಲಿ; ಮತ್ತೆ ಐವರಿಗೆ ಸೋಂಕು
ಕೊಡಗು, ಜು.12: ಜಿಲ್ಲೆಯಲ್ಲಿ ಈ ದಿನ ಹೊಸದಾಗಿ ಐದು ಕೋವಿಡ್ ಸೋಂಕಿತ ಪ್ರಕರಣಗಳು ಮತ್ತು ಒಂದು ಸಾವು ಸಂಭವಿಸಿದೆ.
ವಿರಾಜಪೇಟೆ ತಾಲೂಕಿನ ನಿವಾಸಿ, 86 ವರ್ಷದ ಕೊರೋನ ಸೋಂಕಿತ ಮಹಿಳೆಯೊಬ್ಬರು ಜು.11ರಂದು ರಾತ್ರಿ 10:45ರ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ವೃದ್ಧೆಯನ್ನು ಜು.6ರಂದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜು.7ರಂದು ಅವರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿತ್ತು. ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಜಿಲ್ಲೆಯಲ್ಲಿ ಮತ್ತೆ ಐವರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಈ ನಡುವೆ ರವಿವಾರ ಜಿಲ್ಲೆಯಲ್ಲಿ ಹೊಸದಾಗಿ ಐದು ನಿಯಂತ್ರಿತ ವಲಯಗಳನ್ನು ತೆರೆಯಲಾಗಿದೆ.
ಅವುಗಳೆಂದರೆ..
►ತಲ್ತರೆಶೆಟ್ಟಳ್ಳಿ, ಸೋಮವಾರಪೇಟೆ
►ತೋರ, ವಿರಾಜಪೇಟೆ
►ವಿಜಯನಗರ ಬಡಾವಣೆ, ಗೋಣಿಕೊಪ್ಪ
►ಪರಿಷ್ ಬಾಣೆ, ಮಡಿಕೇರಿ
►ಶಿವರಾಮ ಕಾರಂತ ಬಡಾವಣೆ, ಕುಶಾಲನಗರ
Next Story