ಕಲಬುರಗಿ: ತುಂಬಿ ಹರಿಯುತ್ತಿದ್ದ ಹಳ್ಳ ದಾಟುವ ದುಸ್ಸಾಹಸ; ಬೈಕ್ ಜೊತೆ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ
ಸ್ಥಳೀಯರಿಂದ ರಕ್ಷಣೆ
ಕಲಬುರಗಿ, ಜು.24: ಕೊಡ ಮಾರುವ ವ್ಯಕ್ತಿ ತುಂಬಿ ಹರಿಯುವ ಹಳ್ಳದಲ್ಲಿ ಬೈಕ್ ಓಡಿಸಿಕೊಂಡು ಹೋಗುವ ದುಸ್ಸಾಹಸ ಮಾಡಿದ್ದು, ಹಳ್ಳ ದಾಟಲಾಗದೆ ನೀರಿನಲ್ಲಿ ಕೊಚ್ಚಿಹೋಗಿದ್ದು, ಬಳಿಕ ಸ್ಥಳೀಯರು ರಕ್ಷಿಸಿದ ಘಟನೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಹಡಲಗಿ ಮಧ್ಯೆ ಇರುವ ಹಳ್ಳದಲ್ಲಿ ಶುಕ್ರವಾರ ನಡೆದಿದೆ.
ಕೊಡಗಳನ್ನು ಬೈಕ್ ಗೆ ಕಟ್ಟಿಕೊಂಡು ಮಾರಾಟ ಮಾಡಲು ಗ್ರಾಮದಿಂದ ಗ್ರಾಮಕ್ಕೆ ತೆರಳುತ್ತಿದ್ದ ವ್ಯಕ್ತಿಯೋರ್ವ ಕೊಡ ಮಾರಿಕೊಂಡು ಮರಳಿ ಗ್ರಾಮಕ್ಕೆ ಬರುವಾಗ ಮಾದನಹಿಪ್ಪರಗಾ- ಹಡಲಗಿ ನಡುವೆ ಹಳ್ಳ ತುಂಬಿ ಹರಿಯುತ್ತಿತ್ತು. ಇದನ್ನು ಲೆಕ್ಕಿಸದೇ ಬೈಕ್ ಸವಾರ ಹಳ್ಳದಲ್ಲಿ ಬೈಕ್ ದಾಟಿಸಲು ಹೋಗಿ ಈ ಘಟನೆ ಸಂಭವಿಸಿದೆ.
ಬೈಕ್ ಮತ್ತು ಸವಾರ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ನೋಡಿದ ಸ್ಥಳಿಯರು ವಿಡಿಯೋ ಮಾಡಿಕೊಂಡಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋದ ಬೈಕ್ ಸವಾರನನ್ನು ಬಳಿಕ ಸ್ಥಳೀಯರು ರಕ್ಷಿಸಿದ್ದು, ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ತಿಳಿದುಬಂದಿದೆ.
Next Story