ವಿಜಯಪುರದ ನೂತನ ಜಿಲ್ಲಾಧಿಕಾರಿಯಾಗಿ ಪೊಮ್ಮಲ ಸುನೀಲ ಕುಮಾರ್ ಅಧಿಕಾರ ಸ್ವೀಕಾರ
ವಿಜಯಪುರ, ಜು.30: ವಿಜಯಪುರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಪೊಮ್ಮಲ ಸುನೀಲ ಕುಮಾರ್ ಅವರು ಇಂದು ಅಧಿಕಾರ ಸ್ವೀಕರಿಸಿದರು.
ನೂತನ ಡಿಸಿಯಾಗಿ ನೇಮಕಗೊಂಡ ಪೊಮ್ಮಲ ಸುನೀಲ ಕುಮಾರ್ ಅವರನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ ಹೂಗುಚ್ಛ ನೀಡಿ ಬರ ಮಾಡಿಕೊಂಡರು.
2011ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಪೊಮ್ಮಲ ಸುನೀಲ ಕುಮಾರ್ ಈ ಹಿಂದೆ ಕೊಪ್ಪಳ ಜಿಲ್ಲಾಧಿಕಾರಿಯಾಗಿದ್ದರು. ಅಲ್ಲದೇ, ಹಾಸನ, ಹೊಸಪೇಟೆ, ಯಾದಗಿರಿ, ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವಡೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
Next Story