3.92 ಕೋಟಿ ಮೌಲ್ಯದ ಆರ್ಟಿಪಿಸಿಆರ್ ಕಿಟ್ ಖರೀದಿ
ಬೆಂಗಳೂರು, ಆ.1: ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ವೇರ್ಹೌಸ್ ಸೊಸೈಟಿಯು ಫ್ಯಾಬ್ ಫಾರ್ಮಾಸ್ಯುಟಿಕಲ್ಸ್ ಕಂಪೆನಿಯಿಂದ 3.92 ಕೋಟಿ ರೂ. ಮೊತ್ತದಲ್ಲಿ 35 ಸಾವಿರ ಆರ್ಟಿಪಿಸಿಆರ್ ಕಿಟ್ಗಳನ್ನು ಖರೀದಿಸಿದೆ ಎಂದು ನಿರ್ದೇಶಕಿ ಮಂಜುಶ್ರೀ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಸುಮಾರು 35 ಸಾವಿರ ಕಿಟ್ಗಳಿಗೆ ತಲಾ 1120 ರೂ.ನಂತೆ(ಜಿಎಸ್ಟಿ ಸೇರಿ) ಖರೀದಿಸಲಾಗಿದೆ. ಇದೇ ಸಂದರ್ಭದಲ್ಲಿ ಒಡಿಸ್ಸಾ ಸ್ಟೇಟ್ ಮೆಡಿಕಲ್ ಕಾರ್ಪೊರೇಷನ್ 35 ಸಾವಿರ ಕಿಟ್ಗಳಿಗೆ 1300 ರೂ.ನೀಡಿದೆ. ತೆಲಂಗಾಣ ಸ್ಟೇಟ್ ಮೆಡಿಕಲ್ ಸಂಸ್ಥೆಯು 1,344 ರೂ.ನೀಡಿ 35 ಸಾವಿರ ಕಿಟ್ಗಳನ್ನು ಖರೀದಿಸಿದೆ. ಹಾಗೆ ನೋಡಿದರೆ ಕರ್ನಾಟಕವು ಕಡಿಮೆ ಬೆಲೆಗೆ ಆರ್ಟಿಪಿಸಿಆರ್ ಕಿಟ್ಗಳನ್ನು ಖರೀದಿಸಿದೆ ಎಂದು ತಿಳಿಸಿದ್ದಾರೆ.
Next Story